ಪಂಜ ಬಾವಿಗೆ ರಿಂಗ್ ಅಳವಡಿಸುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕ :ಜೊತೆಗಾರರ ಕ್ಷಿಪ್ರ ಕಾರ್ಯಚರಣೆಯಲ್ಲಿ ಕಾರ್ಮಿಕನ ರಕ್ಷಣೆ :ಆಸ್ಪತ್ರೆಗೆ ದಾಖಲು

ಪಂಜ ಬಾವಿಗೆ ರಿಂಗ್ ಅಳವಡಿಸುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕ :ಜೊತೆಗಾರರ ಕ್ಷಿಪ್ರ ಕಾರ್ಯಚರಣೆಯಲ್ಲಿ ಕಾರ್ಮಿಕನ ರಕ್ಷಣೆ :ಆಸ್ಪತ್ರೆಗೆ ದಾಖಲು

   ಬಾವಿಗೆ ರಿಂಗ್ ಅಳವಡಿಸಿ ಬದಿಗೆ ಮಣ್ಣು ತುಂಬಿಸುತ್ತಿದ್ದ ವೇಳೆ ಮಣ್ಣಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿ ಕೂದಲೆಳೆ ಅಂತರದಲ್ಲಿ ಬದುಕುಳಿದ  ಘಟನೆ ಜೂನ್ 29ರ ಸಂಜೆ ಪಂಜ ಬಳಿ ನಡೆದಿದೆ.

ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಗೆ  ರಿಂಗ್ ಅಳವಡಿಸಿದ್ದು ಅದರ ಸುತ್ತ  ಕೇರಳದ ರ ಕಾರ್ಮಿಕರು ಮಣ್ಣು ತುಂಬುವ ಕೆಲಸ ಮಾಡುತ್ತಿದ್ದರು.

 ಈ ವೇಳೆ ರಿಂಗ್  ಬದಿಯ ಮಣ್ಣು ಏಕಾಏಕಿ ಕುಸಿದು ಓರ್ವ ಕಾರ್ಮಿಕ ಮಣ್ಣಿನಲ್ಲಿ ಸಿಲುಕಿ ಕುತ್ತಿಗೆ ಭಾಗದ ವರೆಗೆ ಮಣ್ಣು ಜರಿದು ಬಿದ್ದಿತ್ತು.

 ತಕ್ಷಣ ಅಲ್ಲಿದ್ದ ಇತರ ಕಾರ್ಮಿಕರು ಜೆಸಿಬಿ  ಸಹಾಯದಿಂದ ಕೂಡಲೇ ಮಣ್ಣು ತೆಗೆದು ಚಿಕಿತ್ಸೆ ಗಾಗಿ ಸುಳ್ಯದ ಆಸ್ಪತ್ರೆಯೊಂದಕ್ಕೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ರಾಜ್ಯ