🏏 ಟಿ 20 ವಿಶ್ವ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 177 ರನ್ ಗುರಿ ನೀಡಿದ ಭಾರತ.

🏏 ಟಿ 20 ವಿಶ್ವ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 177 ರನ್ ಗುರಿ ನೀಡಿದ ಭಾರತ.

ಟಿ 20 ವಿಶ್ವ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ ತಂಡ ಗೆಲ್ಲಲು 177 ರನ್ ಗುರಿಯನ್ನು ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದ್ದಲ್ಲಿತ್ತು. ನಂತರ ಬ್ಯಾಟಿಂಗ್ ನಲ್ಲಿ ಭಡ್ತಿ ಪಡೆದು ಆಡಲು ಬಂದ ಅಕ್ಷರ್ ಪಟೇಲ್ ವಿರಾಟ್ ಕೊಹ್ಲಿ ಜೊತೆಯಾಗಿ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಉತ್ತಮ ಸ್ಥಿತಿ ತಲುಪಲು ನೆರವಾದರು. 31 ಎಸೆತದಲ್ಲಿ 4 ಸಿಕ್ಸ್ ಮತ್ತು 1 ಬೌಂಡರಿ ಸಿಡಿಸಿದ ಅಕ್ಷರ್ ಪಟೇಲ್ 47 ರನ್ ಗಳಿಸಿ ರನ್ ಔಟ್ ಆಗಿ ನಿರ್ಗಮಿಸಿದರು.ವಿರಾಟ್ ಕೊಹ್ಲಿ 59 ಎಸೆತದಲ್ಲಿ 2 ಸಿಕ್ಸ್ ಮತ್ತು 6 ಬೌಂಡರಿ ಒಳಗೊಂಡ 76 ರನ್ ಗಳಿಸಿ ಔಟಾದರು. ಶಿವಂ ದುಬೆ 16 ಎಸೆತದಲ್ಲಿ 27 ರನ್ ಗಳಿಸಿ ತಂಡ ಮೊತ್ತ 176 ರನ್ ತಲುಪಲು ನೆರವಾದರು. ದಕ್ಷಿಣ ಆಫ್ರಿಕಾ ತಂಡ ಗೆಲ್ಲಲು 177 ರನ್ ಗಳಿಸಬೇಕಾಗಿದ್ದು ಭಾರತದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದಲ್ಲಿ ವಿಶ್ವ ಕಪ್ ಭಾರತದ ಮಡಿಲಿಗೆ ಲಭಿಸಲಿದೆ.

ಕ್ರೀಡೆ