ಭಾರತಕ್ಕೆ ಒಲಿದ ಟಿ 20 ವಿಶ್ವ ಕಪ್.

ಭಾರತಕ್ಕೆ ಒಲಿದ ಟಿ 20 ವಿಶ್ವ ಕಪ್.

ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ 20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟದ ಪೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೋಹ್ಲಿ ಮತ್ತು ಅಕ್ಷರ್ ಪಟೇಲ್ ರ ಉತ್ತಮ ಪ್ರದರ್ಶನದಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 177 ರನ್ ಗುರಿ ನೀಡಿತು. 177 ರನ್ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ ಆರಂಭದಲ್ಲೇ ತನ್ನ 3 ವಿಕೆಟ್ ಕಳೆದು ಕೊಂಡಿತು. ಅಂತಿಮವಾಗಿ ಆಪ್ರಿಕಾ ತಂಡ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಸೋಲಯನ್ನು ಒಪ್ಪಿಕೊಂಡಿತು. ಭಾರತದ ಪರ
ಹಾರ್ದಿಕ್ ಪಾಂಡ್ಯ 20 ರನ್ ನೀಡಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಮಿಂಚಿದರು. 11 ವರ್ಷದ ಬಳಿಕ ಭಾರತ ತಂಡ ಐ ಸಿ ಸಿ ಕಪ್ ಗೆಲ್ಲುವ ಮೂಲಕ ವಿಶ್ವ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕ್ರೀಡೆ