ಟಿ 20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟದ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಭಾರತ ತಂಡ ಫೈನಲ್ ಪ್ರವೇಶಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ರೋಹಿತ್ ಶರ್ಮಾ ಅವರ ಅರ್ಧ ಶತಕ ಮತ್ತು ಸೂರ್ಯಕುಮಾರ್ ಅವರ 47 ರನ್ ಗಳ ಉತ್ತಮ ಪ್ರದರ್ಶನದಿಂದಾಗಿ ಇಂಗ್ಲೆಂಡ್ ತಂಡಕ್ಕೆ 172 ರನ್ ಗಳ ಕಠಿಣ ಗುರಿಯನ್ನು ನೀಡಿತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಅಕ್ಷರ್ ಪಟೇಲ್ ಮುಳುವಾದರು. ಅವರು ಮೂರು ವಿಕೇಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅಂತಿಮವಾಗಿ ಇಂಗ್ಲೆಂಡ್ 16.4 ಓವರ್ ಗಳಲ್ಲಿ 103 ರನ್ ಗಳಿಸಿ ಆಲೌಟ್ ಆಯಿತು. ಸ್ಟಾರ್ ಆಟಗಾರ ವಿರಾಟ್ ಕೋಹ್ಲಿ ಯ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರೆಯಿತು. ಭಾರತ 29 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪೈನಲ್ ಪಂದ್ಯ ಆಡಲಿದೆ.


