ಟಿ 20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟದ ಸೂಪರ್ 8 ಗುಂಪಿನ ಭಾರತ ತಂಡ ಮತ್ತು ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 206 ರನ್ ಗುರಿಯನ್ನು ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 6 ರನ್ ಗಳಿಸುವಷ್ಟರಲ್ಲಿ ವಿರಾಟ್ ಕೋಹ್ಲಿ ಶೂನ್ಯಕ್ಕೆ ಔಟ್ ಆದರು. ಸ್ಫೋಟಕ ಆಟ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮ ಆಸ್ಟ್ರೇಲಿಯಾ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿ 41 ಎಸೆತದಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿ 92 ರನ್ ಗಳಿಸಿ ಔಟಾದರು. ಉಳಿದಂತೆ ಸೂರ್ಯ ಕುಮಾರ್ ಯಾದವ್ 31 ಪಂತ್ 15 ದುಬೆ 28 ಪಾಂಡ್ಯ 27 ಜಡೇಜಾ 9 ರನ್ ಗಳಿಸಿ ಅಂತಿಮವಾಗಿ ಭಾರತ ತಂಡ 205 ರನ್ ಗಳಿಸುವಲ್ಲಿ ನೆರವಾದರು. ಆಸ್ಟ್ರೇಲಿಯಾ ಪರ ಸ್ಟಾರ್ಕ್ ಮತ್ತು ಸ್ಟೋನಿಸ್ ತಲಾ 2 ವಿಕೆಟ್ ಪಡೆದರು.


