
ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆಯಲ್ಲಿ ಆಕಸ್ಮತ್ತಾಗಿ ಜಾರಿ ಬಿದ್ದು ಮೈ ಮೇಲೆ ಬಿಸಿ ನೀರು ಚೆಲ್ಲಿ

ಗಂಭೀತ ಗಾಯ ಗೊಂಡಿದ್ದ ಯುವತಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುದ್ಕುಳಿ ಎಂಬಲ್ಲಿ ವರದಿಯಾಗಿದೆ.ಮೃತಪಟ್ಟ ಯುವತಿ ಆಲೆಟ್ಟಿಯ ಕುದ್ಕುಳಿ ದಿ.ಸುಬ್ರಾಯ ರವರ ಪುತ್ರಿ ಕು.ರೇಖಾ (35)ಎಂದು ತಿಳಿದು ಬಂದಿದೆ.
ಈಕೆ ವಾರದ ಹಿಂದೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾಗ ಬಿಸಿ ನೀರಿನ ಪಾತ್ರೆ ಆಕಸ್ಮಿಕವಾಗಿ ಮೈಮೇಲೆ ಬಿದ್ದು ಗಂಭೀರ ಗಾಯ ಗೊಂಡಿದ್ದರು.
ಮನೆಯಲ್ಲಿ ಯುವತಿಯ ತಾಯಿ ಮತ್ತು ಅಕ್ಕ ಮಾತ್ರ ಇದ್ದು. ಸ್ಥಳೀಯರ ನೆರವಿನಿಂದ ಸುಳ್ಯದ ಸರಕಾರಿ ಆಸ್ಪತ್ರೆಗೆ ಯುವತಿಯನ್ನು ಕರೆ ತಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ದಿನ ಕಳೆದಂತೆ ಬಿಸಿ ನೀರು ಬಿದ್ದು ಗುಳ್ಳೆ ಬಂದ ಭಾಗಗಳಲ್ಲಿ ಒಡೆದು ರಕ್ತಸೋರಲಾರಂಭಿಸಿದ್ದರಿಂದಾಗಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
.
