ಸುಳ್ಯ ಕಾಂತಮಂಗಲ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈದ ಆರೋಪಿ ಪೋಲಿಸ್ ವಶ…?

ಸುಳ್ಯ ಕಾಂತಮಂಗಲ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈದ ಆರೋಪಿ ಪೋಲಿಸ್ ವಶ…?

 ಸುಳ್ಯದ ಕಾಂತಮಂಗಲದ ಶಾಲೆ ಆವರಣದಲ್ಲಿ ವ್ಯಕ್ತಿಯೊಬ್ಬರನ್ನು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದ ಪ್ರಕರಣವನ್ನು  ಭೇದಿಸುವಲ್ಲಿ ಪೋಲಿಸರು ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಭಂದಿಸಿ ನಿನ್ನೆಯೇ ಎಡಮಂಗಲದ ಮೂಲದ ಉದಯ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ, ವಿಚಾರಣೆ ವೇಳೆ  ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ

ಮೊಬೈಲ್ ಎಗರಿಸಿ ಬಂದಿದ್ದರಾ..?

ಮೊಬೈಲ್  ಸಿಮ್ ಕೊಲೆಯಾದ ಸ್ಥಳದಲ್ಲಿ ಪತ್ತೆಯಾಗಿತ್ತು, ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದಾಗ  ಪಂಜದ ವ್ಯಕ್ತಿಯ ಮೊಬೈಲ್ ಕಳೆದು ಹೋಗಿರುವ ಬಗ್ಗೆ ತಿಳಿದು ಪೋಲಿಸರಿಗೆ ಮಾಹಿತಿ ಸಿಕ್ಕಿತ್ತು ಈ ಬಗ್ಗೆ ಮತ್ತಷ್ಟು ವಿಚಾರಿಸಿದಾಗ ಪೋಲಿಸರಿಗೆ ಬಹುತೇಕ ಕೊಲೆಗಾರನ ಬಗ್ಗೆ ಸುಳಿವು ಸಿಕ್ಕಿತ್ತು.

ಮೃತ ವಸಂತ್ ಹಾಗೂ ಆರೋಪಿ ಉದಯ್ ,ಕೂಲಿ ಕೆಲಸ ಮಾಡುತ್ತಿದ್ದರು. ಪಂಜ ಸಮೀಪ ಹುಲ್ಲು  ಕತ್ತರಿಸುತ್ತಿದ್ದಾಗ ಅಲ್ಲೆ ಬಾವಿ ರಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೊಬೈಲ್ ಎಗರಿಸಿ ಪರಾರಿಯಾಗಿದ್ದರು ಎಂದು ಹೇಳಲಾಗಿದೆ.ಕದ್ದ ಮೊಬೈಲ್ ಮಾರಾಟ ಮಾಡಿ ಅದರ ಹಣದಲ್ಲಿ ಕಂಠ ಪೂರ್ತಿ  ಕುಡಿದು ಸುಳ್ಯಕ್ಕೆ ಜೊತೆಯಾಗಿ ಬಂದಿರಬಹುದು ಎಂದು ಹೇಳಲಾಗಿದೆ.ಪಂಜದ ಹೊಟೆಲ್ ಗೆ ಇಬ್ಬರು ಜೊತೆಯಾಗಿ ಹೋಗಿರುವ ಬಗ್ಗೆಯೂ ಮಾಹಿತಿ ಪೋಲಿಸರಿಗೆ ಲಭಿಸಿತ್ತು ಎನ್ನಲಾಗಿದೆ ಕಳವು ಮಾಡಿರುವ ಮೊಬೈಲ್ ಸಿಮ್ ಸ್ಥಳದಲ್ಲಿ ಸಿಕ್ಕಿ ಪ್ರಕರಣಕ್ಕೆ ಟ್ವಿಸ್ಟ್ ನೀಡಿತ್ತು.

ಕೊಲೆಯಾದ ಸ್ಥಳದಲ್ಲಿ ಪತ್ತೆಯಾಗಿತ್ತು ಮದ್ಯದ ಸ್ಯಾಚೆಟ್, 

ಹೌದು ಸೋಮವಾರ ನಸುಕಿನ ಜಾವ ಕೊಲೆಯಾದ ವ್ಯಕ್ತಿಯ ಪಕ್ಕದಲ್ಲಿತ್ತು ಮದ್ಯದ ಸ್ಯಾಚೆಟ್. ಇದು ಪೋಲಿಸರಿಗೆ ಮಹತ್ವದ ಸುಳಿವು ನೀಡಿದೆ ಎನ್ನಲಾಗಿದೆ, ಮದ್ಯದ ಸ್ಯಾಚೆಟ್ ಯಾವ ಬಾರಿನಲ್ಲಿ ಮಾರಾಟ ಮಾಡಲಾಗಿದೆ ಎಂಬ ಸುಳಿವು ಪೋಲಿಸರಿಗೆ ಬೇಕಾಗಿತ್ತು ಅದಕ್ಕಾಗಿ ಅಭಕಾರಿ ಪೋಲಿಸರ ನೆರವು ಯಾಚಿಸಿದ ಪೋಲಿಸರು, ಅದನ್ನು ಮಾರಾಟ ಮಾಡಲಾದ ಬಾರಿನ ಮಾಹಿತಿ ಕಲೆ ಹಾಕಿ ಸಿ ಸಿ ಕ್ಯಾಮರ ಪರಿಶೀಲಿಸಿತ್ತು,ಅದು ಸುಳ್ಯದ ಬಾರ್ ಎಂದು ತಿಳಿದು ಬಂತು. ಈ ಸಂದರ್ಭ ಮದ್ಯ ಖರೀದಿಗೆ ಕೊಲೆಯಾದ ವಸಂತ ಜೊತೆ ಆರೋಪಿಯು ಜೊತೆಗಿದ್ದ ಇದರಿಂದ ಪೋಲಿಸರ ಸಂಶಯ ಭಲವಾಗಿ ಆರೋಪಿಯ ಬಂಧಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ. ಸಿ ಸಿ ಪರೀಶಿಲಿಸುವ ಅಲ್ಪ ಮೊದಲು ಬಾರಿಗೆ ಬಂದಿದ್ದ ಆರೋಪಿ.

ಕೊಲೆಯಾದ ವಸಂತ ಮತ್ತು ಆರೋಪಿ ನಡುವೆ ಆಗಷ್ಟೆ ಗೆಳೆತನವಾಗಿತ್ತು

ಕೊಲೆಯಾದ ವಸಂತ ಮತ್ತು ಆರೋಪಿ ನಡುವೆ ಆಗಷ್ಟೆ ಗೆಳೆತನವಾಗಿತ್ತು

ಕುಡಿದ ಮತ್ತಿನಲ್ಲ ವಸಂತ ಮತ್ತು ಉದಯ್ ಕಾಂತಮಂಗಲಕ್ಕೆ ಹೋಗಿದ್ದಾರೆ, ಅಲ್ಲಿ ಶಾಲೆ ಜಗುಲಿಯಲ್ಲಿ ಇಬ್ಬರು ಜಗಳ ಗೈದಿರುವ ಸಾದ್ಯತೆ ಕಂಡುಬರುತ್ತದೆ  ಒಂದು ಹಂತದಲ್ಲಿ ಇಬ್ಬರ ಜಗಳ ತಾರಕಕ್ಕೇರಿದೆ. ಈ ಹಂತದಲ್ಲಿ ಉದಯ್ ತಂದೆ-ತಾಯಿಗೆ ವಸಂತ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಉದಯ್ ವಸಂತ್ ನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಭಾನುವಾರ ತಡರಾತ್ರಿ ಕೊಲೆಯಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆಇವರಿಬ್ಬರು ಕಾಂತಮಂಗಲಕ್ಕೆ ಯಾಕೆ ಹೋಗಿದ್ದರು ಎನ್ನುವುದು ಪ್ರಶ್ನೆಯಾಗಿದೆ.

ಯಾರೀತ ವಸಂತ..?

ಮೂಲತ ವಿರಾಜ ಪೇಟೆಯ ವ್ಯಕ್ತಿ ವಸಂತ  ಚೆಂಬು ಗ್ರಾಮದ ಕುದ್ರೆಪಾಯದ ಭವಾನಿ ಎಂಬವರನ್ನು ಮದುವೆಯಾಗಿ ಎರಡು ಮಕ್ಕಳಿದೆ, ಕಳೆದ ಆರೇಳು ತಿಂಗಳಿಂದ ಮನೆ ಬಿಟ್ಟು ಕಾಣಿಯೂರಿನಲ್ಲಿ ಮನೆಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದ.

ಕೊಲೆ ಆರೋಪಿ ಎಡಮಂಗಲದವನಾಗಿದ್ದು ಆತ ಎರಡು ವಿವಾಹವಾಗಿದ್ದು, ಆತನ ಪುತ್ರಿ ಕಾಂತಮಂಗಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾರಣ ಪುತ್ರಿಯನ್ನು ನೋಡಲು ಆವಾಗಾವಾಗ ಬರುತ್ತಿದ್ದ ಆರೋಪಿ ಬಳಿಕ ಕಾಂತಮಂಗಲ ಶಾಲೆಯಲ್ಲಿ ಮಲಗುತ್ತಿದ್ದ, ಕೊಲೆ ಮಾಡುವ ದಿವಸ ಹೊಸ ಗೆಳೆಯನನ್ನು ಕರೆದುಕೊಂಡು ಬಂದು ಹಣಕ್ಕಾಗಿ ಕೊಲೆಮಾಡಿದ್ದ, ಕೊಲೆಯಾದವನ 800 ರೂ ಮತ್ತು ಮೊಬೈಲ್ ಎಗರಿಸಿ ಪರಾರಿಯಾಗಿದ್ದ.

ರಾಜ್ಯ