
ಬಂಟ್ವಾಳ: ಸ್ನೇಹಿತರಿಬ್ಬರ ಹಳೆಯ ದ್ವೇಷಕ್ಕೆ ಬಲಿಯಾದ ಬೈಕ್. ಇದು ಬಂಟ್ವಾಳದ ಕುಮ್ಡೆಲುವಿನಲ್ಲಿ ನಡೆದ ಘಟನೆ.

ಚಂದ್ರಹಾಸ ಎಂಬವರಿಗೆ ಸೇರಿದ ಬೈಕ್ ಇದಾಗಿದ್ದು, ಆರೋಪಿ ನಿತೇಶ್ ಎಂಬಾತ ಬೈಕ್ ಗೆ ಬೆಂಕಿ ನೀಡಿ ಸುಟ್ಟು ಹಾಕಿದ್ದಾನೆ ಎಂದು ಸುಮಂತ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೈಕ್ ನ ಬೆಲೆ ಸುಮಾರು 20 ಸಾವಿರ ಆಗಿರಬಹುದು ಎಂದು ಹೇಳಲಾಗಿದೆ.
ಇದೀಗ ಗ್ರಾಮಾಂತರ ಪೋಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ
ಅಷ್ಟಕ್ಕೂ ಇಲ್ಲಿ ನಡೆದ ಘಟನೆ ಏನು ಗೊತ್ತಾ?
ಅಮ್ಮುಂಜೆ ಪಾಂಡೀಲು ನಿವಾಸಿ ಚಂದ್ರಹಾಸ ಎಂಬವರು ಶಬರಿಮಲೆಗೆ ಹೋಗುವ ವೇಳೆ ಸ್ನೇಹಿತ ಕುಮ್ಡೆಲು ನಿವಾಸಿ ಸುಮಂತ್ ಅವರ ಮನೆಯ ಪಕ್ಕ ಬೈಕ್ ನಿಲ್ಲಿಸಿ ಕೀಯನ್ನು ಇವರಲ್ಲಿ ನೀಡಿ ಹೋಗಿದ್ದರು.
ಈ ಮಧ್ಯೆ ಸುಮಂತ್ ಅವರು ಒಂದು ಬಾರಿ ಬೈಕ್ ನ್ನು ಬಳಕೆ ಮಾಡಿ ವಾಪಸು ಅದೇ ಜಾಗದಲ್ಲಿ ತಂದು ನಿಲ್ಲಿಸಿದ್ದ.
ಸುಜಿತ್ ಹಾಗೂ ಆರೋಪಿ ನಿತೇಶ್ ಅವರಿಗೆ ಕೆಲ ದಿನಗಳ ಹಿಂದೆ ಗಲಾಟೆ ನಡೆದಿದ್ದು, ಈ ಬಗ್ಗೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಸುಜಿತ್ ತಮ್ಮ ಬಳಕೆ ಮಾಡಿದ ಬೈಕ್ ಇವನದ್ದೇ ಎಂದು ಭಾವಿಸಿ ಆತನ ಮೇಲಿನ ಕೋಪದಿಂದ ಮನೆಯ ಸಮೀಪ ನಿಲ್ಲಿಸಲಾಗಿದ್ದ ಬೈಕ್ ಸ್ವಲ್ಪ ದೂರ ದೂಡಿ ಕೊಂಡು ಹೋಗಿ ಬೆಂಕಿ ಹಚ್ಚಿದ್ದ. ಈತನ ಕೃತ್ಯವನ್ನು ನೋಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದೀಗ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ
