
ಬೆಳ್ಳಾರೆ ಸಮೀಪದ ಬೂಡು ಎಂಬಲ್ಲಿ ಮಹಿಳೆಯೊಬ್ಬರು ಹಾವು ಕಡಿತಕ್ಕೆ ಬಲಿಯಾಗಿರುವ ಘಟನೆ ಜೂ.12 ರಂದು ರಾತ್ರಿ ನಡೆದಿದೆ. ಬೆಳ್ಳಾರೆ ಸಮೀಪದ ಬೂಡು ಚೋಮ ಎಂಬವರ ಪತ್ನಿ ಸುಶೀಲ ಮೃತಪಟ್ಟ ಮಹಿಳೆ ಇವರು

ಬೆಳ್ಳಾರೆ ನೆಟ್ಟಾರಿನ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾಗ ಹಾವು ಕಡಿತಕ್ಕೆ ಒಳಗಾಗಿದ್ದರು ,ಅವರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
