
ಮಂಗಳೂರು: ಇಬ್ಬರು ಅನ್ಯ ಕೋಮಿನ ಯುವಕರ ಜೊತೆ ಹಿಂದೂ ಯುವತಿಯೊಬ್ಬಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮುಕ್ಕದಲ್ಲಿ ನಡೆದಿದೆ.


ಮುಕ್ಕ ಸಮೀಪ ಒಂದು ಕಾರಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯೊಬ್ಬಳು ಬಂದಿದ್ದು ದಾರಿಯಲ್ಲಿ ಅಡ್ಡ ಬಂದ ಸ್ಕೂಲ್ ಬಸ್ ಡ್ರೆವರ್ ಜೊತೆ ಜಗಳವಾಡುತ್ತ ಹಿಗ್ಗಾಮುಗ್ಗಾ ಬೈದಾಡುತ್ತಾ ಡ್ರೈವರ್ಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಇದರಿಂದ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು ಗಮನಿಸಿ ಯುವತಿ ಮತ್ತು ಯುವಕರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಎಸ್ಕೇಪ್ ಆಗಲು ಯತ್ನಿಸುತ್ತಿದ್ದಂತೆ ಕಾರು ಕೈ ಕೊಟ್ಟಿದೆ. ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಇದು ಅನ್ಯಕೋಮಿನ ಜೋಡಿ ಎಂಬುದು ಬೆಳಕಿಗೆ ಬಂದಿದೆ. BMW ಕಾರಿಗೆ ಫುಲ್ ಟಿಂಟ್ ಅಳವಡಿಸಿದ್ದು, ಕಾರಿನ ಹಿಂದೆ ನಂಬರ್ ಪ್ಲೇಟ್ ಅಳವಡಿಸಿದೆ ಈ ರೀತಿ ಅನ್ಯಕೋಮಿನ ಜೋಡಿ ಸುತ್ತಾಡುತ್ತಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪದೇ ಪದೇ ಇಂತಹ ಘಟನೆಗಳು ಬೆಳಕಿಗೆ ಬರುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

