ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿ ಪ್ರಥಮ್ ರವರಿಗೆ ಸನ್ಮಾನ

ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿ ಪ್ರಥಮ್ ರವರಿಗೆ ಸನ್ಮಾನ

2024 ನೇ ಸಾಲಿನ ಈ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 676 ಅಂಕಗಳನ್ನು ಗಳಿಸಿ ಉನ್ನತ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿ ಪ್ರಥಮ್ ಶೇಖರ್ ರವರನ್ನು ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ರವರು ಶಾಲು ಹೊದಿಸಿ ಹಾರ ಹಾಕಿ 10,000 ರೂಪಾಯಿ ನಗದು ಬಹುಮಾನವನ್ನಿತ್ತು ಸನ್ಮಾನಿಸಿ ವಿದ್ಯಾರ್ಥಿಯ ಉಜ್ವಲ ಶೈಕ್ಷಣಿಕ ಭವಿಷ್ಯಕ್ಕೆ ಶುಭ ಹಾರೈಸಿದರು.
ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ಪ್ರಾಂಶುಪಾಲರಾದ ಡಾ. ಯಶೋದ ರಾಮಚಂದ್ರ ಉಪಪ್ರಾಂಶುಪಾಲರಾದ ದೀಪಕ್ ವೈ. ಆರ್, ಅಧ್ಯಾಪಕರಾದ ಭವ್ಯ ಸಿ.ಟಿ, ಅರ್ಪಿತ ಕೆ. ಎನ್ ಹಾಗೂ ರತ್ನಾವತಿ ಬಿ ಅವರನ್ನು ಗೌರವಿಸಿ ಸನ್ಮಾನಿಸಿದರು. ಡಾ. ಯಶೋದ ರಾಮಚಂದ್ರ ಹಾಗೂ ಡಾ. ಉಜ್ವಲ್ ಯು.ಜೆ ರವರು ಶುಭಹಾರೈಸಿದರು. ಸನ್ಮಾನಿತರಾದ ಪ್ರಥಮ್ ಶೇಖರ್ ರವರ ತಾಯಿ ಶ್ರೀಮತಿ ಪದ್ಮಿನಿ ಶೇಖರ್ ತಮ್ಮ ಮಗನ ಶೈಕ್ಷಣಿಕ ಪ್ರಗತಿಗೆ ಕಾರಣಕರ್ತರಾಗಿ ಸಹಕರಿಸಿದ ಆಡಳಿತ ಮಂಡಳಿ ಹಾಗೂ ಅಧ್ಯಾಪಕರಿಗೆ ಧನ್ಯವಾದಗಳು ತಿಳಿಸಿದರು.

ರಾಜ್ಯ