ಲೋಕಸಭಾ ಚುನಾವಣೆ ಹಿನ್ನಡೆಯ ಬೆನ್ನಲ್ಲೆ ಪುತ್ತೂರು  ಬ್ಲಾಕ್ ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ.

ಲೋಕಸಭಾ ಚುನಾವಣೆ ಹಿನ್ನಡೆಯ ಬೆನ್ನಲ್ಲೆ ಪುತ್ತೂರು  ಬ್ಲಾಕ್ ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ.

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಎರಡು ಬ್ಲಾಕ್ ಗಳಾದ ಪುತ್ತೂರು ಬ್ಲಾಕ್ ಮತ್ತು ಉಪ್ಪಿನಂಗಡಿ – ವಿಟ್ಲ ಬ್ಲಾಕ್ನ ಅಧ್ಯಕ್ಷ ಸ್ಥಾನದ ನಿಗದಿತ ಅವಧಿ 3 ವರ್ಷ ಪೂರ್ಣಗೊಂಡಿದ್ದು, ಇನ್ನು ಮುಂದಿನ ಅವಧಿಗೆ ಮುಂದುವರಿಯುವ ಯಾವುದೇ ಇರಾದೆ ನಮ್ಮಲ್ಲಿ ಇಲ್ಲ. ಹೀಗಾಗಿ ನಮ್ಮನ್ನು ಅಧ್ಯಕ್ಷೀಯ ಹುದ್ದೆಯಿಂದ ಬಿಡುಗಡೆಗೊಳಿಸಬೇಕಾಗಿ ಪಕ್ಷದ ವರಿಷ್ಠರಿಗೆ ತಿಳಿಯಪಡಿಸಿರುವುದಾಗಿ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಎಂ.ಬಿ ವಿಶ್ವನಾಥ ರೈ ಮತ್ತು ಡಾ. ರಾಜಾರಾಮ್ ಕೆ.ಬಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎಂ.ಬಿ ವಿಶ್ವನಾಥ ರೈ ಮತ್ತು ಡಾ. ರಾಜಾರಾಮ್ ಕೆ.ಬಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಪೋಸ್ಟ್ ಗಳು ಹರಿದಾಡುತ್ತಿದ್ದು , ಇದಕ್ಕೆ ಸ್ಪಷ್ಟನೆ ಕೊಡುವ ಉದ್ದೇಶದಿಂದ ಅವರಿಬ್ಬರು ಪತ್ರಿಕಾಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರಿಬ್ಬರು “ ರಾಜೀನಾಮೆ” ಎನ್ನುವ ಪದ ಬಳಕೆ ಮಾಡಿರುವುದು ಸರಿಯಲ್ಲ . ಇದು ರಾಜೀನಾಮೆ ಅಲ್ಲ. ನಮ್ಮ ಅವಧಿ ಮುಗಿದ ಹಿನ್ನಲೆಯಲ್ಲಿ , ಯುವ ನಾಯಕತ್ವಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಮ್ಮನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕಾಗಿ ಪಕ್ಷದ ವರಿಷ್ಠರಿಗೆ ಈ ಹಿಂದೆಯೆ ತಿಳಿಸಿರುವುದಾಗಿಯೂ ಸ್ಪಷ್ಟ ಪಡಿಸಿದರು.

ರಾಜಾರಾಮ್ ಕೆ.ಬಿಯವರ ಅವಧಿ ಈ ವರ್ಷದ ಜನವರಿ ತಿಂಗಳಿನಲ್ಲೂ, ಎಂ.ಬಿ ವಿಶ್ವನಾಥ ರೈಯವರ ಅಧಿಕಾರ ಅವಧಿ ಈ ತಿಂಗಳ ಪೆಭ್ರವರಿ ತಿಂಗಳಿನಲ್ಲೂ ಮುಕ್ತಾಯಗೊಂಡಿದೆ. ಆದರೇ ಅದೇ ವೇಲೆ ಲೋಕಸಭಾ ಚುನಾವಣೆಯೂ ಎದುರಾದುದರಿಂದ , ಹೊಸ ನಾಯಕತ್ವದಲ್ಲಿ ಪಕ್ಷ ಚುನಾವಣಾ ಚಟುವಟಿಕೆ ನಡೆಸುವುದು ಕಷ್ಟವಾಗಬಹುದೆಂದು ನಾವು ಅದೇ ಹುದ್ದೆಯಲ್ಲಿ ಮುಂದುವರಿದಿದ್ದೇವು. ಈಗ ಚುನಾವಣೆಗಳು ಮುಗಿದಿದ್ದು ಹುದ್ದೆ ಬಿಟ್ಟುಕೊಡಲು ಸಶಕ್ತ ಸಮಯ ಎಂದು ಅವರು ಹೇಳಿದರು.

ಪತ್ರಿಕಾ ಪ್ರಕಟನೆಯಲ್ಲಿ ಏನಿದೆ

ನಾವಿಬ್ಬರು ಈ ಎರಡು ಬ್ಲಾಕ್ಗ್ ಗಳ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಸಂತೃಪ್ತಿ ನಮಗಿದೆ. ನಮ್ಮ ಅವಧಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕಾರ್ಯಕರ್ತರನ್ನು ಸಂಘಟಿಸಿದ್ದೇವೆ.ಪಕ್ಷದ ವರಿಷ್ಠರ ಆದೇಶದಂತೆ ಕಾಲ ಕಾಲಕ್ಕೆ ನಿರ್ವಹಿಸಬೇಕಾದ ಕಾರ್ಯಕ್ರಮಗಳನ್ನು ಅಗತ್ಯ ವಿದ್ದರೆ ಪ್ರತಿಭಟನಾ ಸಭೆಗಳನ್ನು ನಡೆಸಿ ಪಕ್ಷವನ್ನು ಸದಾ ಚಟುವಟಿಕೆಯಲ್ಲಿ ಇಟ್ಟಿದ್ದೇವೆ.ಪಕ್ಷದ ಎಲ್ಲಾ ಮಂಚೂಣಿ ಘಟಕಗಳು ಕ್ರಿಯಾಶೀಲವಾಗಿ ಕಾವ್ಯ ವೆಸಗುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ಕಳೆದ ವಿಧಾನ ಸಭಾ ಚುನಾವಣಾ ಸಂಧರ್ಭದಲ್ಲಿ ನಾವಿಬ್ಬರೂ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಆಕಾಂಕ್ಷಿಗಳಾಗಿದ್ದೆವು. ಆದರೂ ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಅಶೋಕ್ ಕುಮಾರ್ ರೈ ಯವರಿಗೆ ಅವಕಾಶ ಕಲ್ಪಿಸಿತು. ಈ ಸಂಧರ್ಭದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿ ನಮ್ಮ ಕರ್ತವ್ಯಕ್ಕೆ ಎಳ್ಳಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ, ಎಲ್ಲೂ ಭಿನ್ನಾಭಿಪ್ರಾಯ ಬಾರದ ರೀತಿಯಲ್ಲಿ ಅಹರ್ನಿಶಿ ಶ್ರಮಿಸಿದ್ದೇವೆ. ನಮ್ಮ ಶ್ರಮದ ಫಲಶೃತಿಯಾಗಿ ಅಶೋಕ್ ಕುಮಾರ್ ರೈ ಯವರು ಶಾಸಕರಾಗಿ ಆರಿಸಿ ಬಂದರು. ನಮ್ಮಿ ಅಧ್ಯಕ್ಷೀಯ ಅವಧಿಯಲ್ಲಿ ಓರ್ವ ಶಾಸಕರನ್ನು ಪಡೆದ ಧನ್ಯತಾ ಭಾವ ನಮಗಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಬೂತ್ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ತೊಡಗಿಸಿಕೊಂಡು ಮತಯಾಚನೆ ಮಾಡಿದ್ದೇವೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕೂಡಾ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ಒಟ್ಟಾರೆ ಹೇಳುವುದಾದರೆ ಪಕ್ಷದ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಪಕ್ಷಕ್ಕೆ ಎಳಷ್ಟೂ ಚ್ಯುತಿ ಬಾರದ ಹಾಗೆ ಕಾರ್ಯನಿರ್ವಹಿಸಿದ್ದೇವೆ ಎಂಬ ಆತ್ಮ ತೃಪ್ತಿ ನಮಗಿದೆ.ಈ ಮೂರು ವರ್ಷಗಳ ಸುಧೀರ್ಘ ಅವಧಿಯಲ್ಲಿ ನಮ್ಮ ಮೇಲೆ ಅಭಿಮಾನ ಪ್ರೀತಿಯಂದ ನಮಗೆ ಬೆಂಬಲಿಸಿದ ಸಹಕರಿಸಿದ ಪಕ್ಷದ, ಎಲ್ಲಾ ನಾಯಕರುಗಳಿಗೆ ಕಾರ್ಯಕರ್ತ ಬಂಧುಗಳಿಗೆ, ಮತದಾರ ಬಂಧುಗಳಿಗೆ ಹೃದಯ ಸ್ಪಷದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಮುಂದಿನ ದಿನಗಳಲ್ಲಿ ಕೂಡಾ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತೇವೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೇಸ್ ಪಕ್ಷ, ಸಮಾನತೆಯನ್ನು, ಸ್ವಾಭಿಮಾನದ ಬದುಕನ್ನು ಬಡವರಿಗೆ ಕೊಟ್ಟ ಪಕ್ಷ ಕಾಂಗ್ರೇಸ್ ಪಕ್ಷ. ಹಲವು ಭಾಗ್ಯಗಳ ಮೂಲಕ ಜನರ ಬದುಕನ್ನು ಹಸನಾಗಿಸಿದ ಪಕ್ಷ ಕಾಂಗ್ರೇಸ್ ಪಕ್ಷ. ಇದರ ಗತ ವೈಭವ ಮರುಕಳಿಸುವಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ದುಡಿಯೋಣ ಎಂದು ನಾವು ಆಶಿಸುತ್ತೇವೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜ್ಯ