
ಕಡಬ, : ಹಿಂದೂ ಸ್ವಾಮೀಜಿ ಮುಖಕ್ಕೆ ಅಣ್ಣಾಮಲೈ ಫೋಟೋ ಇಟ್ಡು ವಾಟ್ಸ್ ಅಪ್ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಘಟನೆ ನಡೆದಿದೆ.


ಕಡಬದ ಅನ್ವರ್ ಎನ್ನುವ ವ್ಯಕ್ತಿ ಯೊಬ್ಬರು ಹಿಂದೂ ಸ್ವಾಮೀಜಿ ಮುಖಕ್ಕೆ ಅಣ್ಣಾಮಲೈ ಫೋಟೋ ಇಟ್ಡು ವಾಟ್ಸ್ ಅಪ್ ಸ್ಟೇಟಸ್ ಹಾಕಿದ್ದರು, ಇದರಿಂದ ಹಿಂದೂ ಸಂಘಟನೆಗಳು ಅನ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆಕ್ರೋಶಕ್ಕೆ ಮಣಿದ ಅನ್ವರ್ ಕಡಬದ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಹಿಂದೂ ಮುಖಂಡರ ಸಮ್ಮುಖದಲ್ಲಿ ಹಿಂದೂ ಸಮಾಜದ ಕ್ಷಮೆಯಾಚನೆ ಮಾಡಿದ್ದಾರೆ.

