ETV, ‘ರಾಮೋಜಿ ಫಿಲಂ ಸಿಟಿ’ ಸಂಸ್ಥಾಪಕ ರಾಮೋಜಿ ರಾವ್ ನಿಧನ.

ETV, ‘ರಾಮೋಜಿ ಫಿಲಂ ಸಿಟಿ’ ಸಂಸ್ಥಾಪಕ ರಾಮೋಜಿ ರಾವ್ ನಿಧನ.

ಹೈದರಾಬಾದ್: ಈನಾಡು ಪತ್ರಿಕೆ, ತೆಲುಗು ಈಟಿವಿ ಹಾಗೂ ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರು ಇಂದು (ಶನಿವಾರ) ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

‘ಈ ಟಿವಿ’ ಸಮೂಹ ಸಂಸ್ಥೆಗಳ ಮಾಲೀಕ ರಾಮೋಜಿ ರಾವ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 87 ವರ್ಷದ ರಾಮೋಜಿ ರಾವ್ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.

ಇಂದು ಮುಂಜಾನೆ 3 ಗಂಟೆ ಸೂಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಖ್ಯಾತ ನಿರ್ಮಾಪಕರೂ ಆಗಿದ್ದ ಅವರು ಹೈದರಾಬಾದಿನಲ್ಲಿ ರಾಮೋಜಿ ಫಿಲಂ ಸಿಟಿ ಸ್ಥಾಪಿಸುವ ಮೂಲಕ ಚಿತ್ರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದರು.

ರಾಮೋಜಿ ಫಿಲಂ ಸಿಟಿ ಪ್ರೇಕ್ಷಣೀಯ ಸ್ಥಳವಾಗಿ ಮಾತ್ರವಲ್ಲದೆ ‘ಬಾಹುಬಲಿ’ ಸೇರಿದಂತೆ ಹಲವು ಹೆಸರಾಂತ ಚಲನಚಿತ್ರಗಳು ಇಲ್ಲಿ ನಿರ್ಮಾಣವಾಗಿದ್ದವು.

ರಾಜ್ಯ