
ಮುಳ್ಳೇರಿಯಾ: ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿ ಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ 4.76 ಕೋಟಿ ರೂ ವಂಚನೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.


ಸಿಪಿಐ-ಎಂ ಮುಳ್ಳೇರಿಯ ಸ್ಥಳೀಯ ಸಮಿತಿ ಮಾಜಿ ಸದಸ್ಯ ಮತ್ತು ಬ್ಯಾಂಕ್ ಕಾರ್ಯದರ್ಶಿ ಕೆ. ರತೀಶನ್ ಮತ್ತು ಅವನ ಸ್ನೇಹಿತ ಜಬ್ಬಾರ್ ಬಂಧಿತರು.
ತಮಿಳುನಾಡಿನ ನಾಮಕ್ಕಲ್ನ ವಸತಿಗೃಹವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಆರೋಪಿಗಳು ಮೊಬೈಲ್ ಬಳಸದಿರುವುದು ಪೊಲೀಸರ ತನಿಖೆಗೆ ಹಿನ್ನಡೆಯನ್ನುಂಟುಮಾಡಿತ್ತು. ರತೀಶನ ಸಂಬಂಧಿಕರು ಮತ್ತು ಸ್ನೇಹಿತರನ್ನು ಕೇಂದ್ರೀಕರಿಸಿ ಪೊಲೀಸರು ನಡೆಸಿದ ತನಿಖೆ ನಡೆಸುವಮೂಲಕ ನಾಮಕ್ಕಲ್ ವಸತಿಗೃಹದಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು .
ಸೊಸೈಟಿಯಿಂದ ರತೀಸನ್ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ಅನಿಲ್ ಕುಮಾರ್, ಗಫೂರ್ ಮತ್ತು ಬಶೀರ್ ಎಂಬುವರ ಸಹಾಯದಿಂದ ಗಿರವಿ ಇಡಲಾಗಿತ್ತು. ಈ ಪೈಕಿ 185 ಪವನ್ ಚಿನ್ನವನ್ನು ವಿವಿಧ ಬ್ಯಾಂಕ್ಗಳಿಂದ ಸೊಸೈಟಿಗೆ ವಸೂಲಿ ಮಾಡಲಾಗಿದೆ.
