ವ್ಯಕ್ತಿಗೆ ಆನ್ಲೈನ್ ವಂಚನೆ : ಪ್ರಕರಣ ದಾಖಲುವ್ಯಕ್ತಿಗೆ ಆನ್ಲೈನ್ ವಂಚನೆ : ಪ್ರಕರಣ ದಾಖಲು.

ವ್ಯಕ್ತಿಗೆ ಆನ್ಲೈನ್ ವಂಚನೆ : ಪ್ರಕರಣ ದಾಖಲುವ್ಯಕ್ತಿಗೆ ಆನ್ಲೈನ್ ವಂಚನೆ : ಪ್ರಕರಣ ದಾಖಲು.

 

ಪುತ್ತೂರು: ಆನ್ಲೈನ್ ಮೂಲಕ ಡ್ರಮ್ ಉತ್ಪನ್ನಗಳನ್ನು ಪೂರೈಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಕೃಷಿ ಉಪಕರಣಗಳನ್ನು ಪೂರೈಸದೆ ವಂಚಿಸಿರುವುದಾಗಿ ವ್ಯಕ್ತಿಯೋರ್ವರು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ನಗರದ ನರಿಮೊಗರು ನಿವಾಸಿ ಗಣೇಶ್ ಪ್ರಭು (40) ಎಂಬವರು ಈ ಕುರಿತು  ದೂರು ನೀಡಿದ್ದಾರೆ.

ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ, ಅಗ್ರೋ ಉತ್ಪನ್ನಗಳನ್ನು ಕೃಷಿಕರಿಗೆ ಮಾರಾಟ ಮಾಡುತ್ತಿದ್ದು, ಯುನಿಟಿ ಪಾಲಿ ಬ್ಯಾರೆಲ್ಸ್ ಪ್ರೈವೇಟ್ ಲಿಮಿಟೆಡ್ ಅಶೋಕ ನಗರ, ಶಿವಾಜಿ ನಗರ, ಪುಣೆ, ಮಹಾರಾಷ್ಟ್ರ ಎಂಬ ಹೆಸರಿನಿಂದ ಗಣೇಶ್ ಪ್ರಭು ಅವರನ್ನು ಸಂಪರ್ಕಿಸಿದ ಅಪರಿಚಿತ ಆರೋಪಿತರು, ಆನ್ ಲೈನ್  ಮುಖಾಂತರ  ಡ್ರಮ್ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಮೇ 8 ರಿಂದ ಮೇ  10ರ ಮಧ್ಯಾಹ್ನ ಅವಧಿಯಲ್ಲಿ, ಪಿರ್ಯಾದಿದಾರರಿಂದ 9152464514  ನೇ ನಂಬ್ರಕ್ಕೆ ರೂ.1,30,500  ಹಣವನ್ನು ಮೂರು ಹಂತಗಳಲ್ಲಿ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರು. ಆದರೆ ಹಣ ಪಡೆದುಕೊಂಡವರು ಈವರೆಗೆ ಡ್ರಮ್ ಮೆಟಿರಿಯಲ್ ಗಳನ್ನು ಕಳುಹಿಸಿಕೊಟ್ಟಿರುವುದಿಲ್ಲ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಗಣೇಶ್ ಪ್ರಭು ಅವರು ನೀಡಿದ ದೂರಿನ ಅನ್ವಯ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

ರಾಜ್ಯ