
: ಸ್ಥಳೀಯ ವಿದ್ಯಾರ್ಥಿನಿಯ ಶೈಕ್ಷಣಿಕ ಸಾಲಕ್ಕೆ ಜಾಮೀನು ಹಾಕಿದ ಗ್ರಾಹಕನ ಸಿಬಿಲ್ ಸ್ಕೋರ್ ಇಲ್ಲ ಎಂದು ಗ್ರಾಹಕ ಬ್ಯಾಂಕ್ ಎದುರು ದರಣಿ ಕುಳಿತ ಘಟನೆ ವರದಿಯಾಗಿದೆ.

ಕಲ್ಲುಗುಂಡಿ ಮೂಲದ ಜಾನಿ ಕೆ.ಪಿ ಪ್ರತಿಭಟನೆ ಮಾಡಿ ಬ್ಯಾಂಕ್ ನ ಕ್ರಮವನ್ನು ಖಂಡಿಸಿದ ವ್ಯಕ್ತಿಯಾಗಿದ್ದಾರೆ.

2016ರಲ್ಲಿ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಸಾಲಕ್ಕೆ ಜಾಮೀನು ಸಹಿ ಮಾಡಿದ್ದರು. ಆಕೆಯ ವಿದ್ಯೆ ಪೂರ್ಣಗೊಂಡ ಬಳಿಕ ಬ್ಯಾಂಕ್ ನಲ್ಲಿ ಸಾಲ ಹಾಗೆಯೇ ಉಳಿದಿತ್ತು.ಬ್ಯಾಂಕ್ ಹಲವು ಬಾರಿ ಮರುಪಾವತಿ ಮಾಡುವಂತೆ ವಿದ್ಯಾರ್ಥಿನಿಯ ಮನೆಗೆ ನೋಟಿಸ್ ನೀಡಿತ್ತು. ಕೊನೆಗೂ ವನ್ ಟೈಮ್ ಸೆಟ್ಲ್ ಮೆಂಟ್ ಆಯ್ಕೆಯಲ್ಲಿ ಸಾಲವನ್ನು ಮರುಪಾವತಿ ಮಾಡಿದ್ದರುಸಾಲವನ್ನು ಮರುಪಾವತಿ ಮಾಡಿರುವ ಬಗ್ಗೆ ಜಾಮೀನು ನೀಡಿದ ವ್ಯಕ್ತಿಗೆ ಬ್ಯಾಂಕ್ ನಿಂದ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ತನ್ನ ಅಗತ್ಯಕ್ಕಾಗಿ ಬ್ಯಾಂಕ್ ಗೆ ತೆರಳಿದಾಗ ವನ್ ಟೈಮ್ ಸೆಟ್ಲ್ ಮೆಂಟ್ ಮಾಡಿದ ಕಾರಣ ‘ಸಿಬಿಲ್’ ಡೌನ್ ಆಗಿದೆ ಎಂದಿದ್ದಾರೆ ಎನ್ನಲಾಗಿದೆ.
ವನ್ ಟೈಮ್ ಸೆಟ್ಲ್ ಮೆಂಟ್ ಮಾಡುವಾ ಜಾಮೀನುದಾರನಾಗಿರುವ ತನಗೆ ಮಾಹಿತಿ ನೀಡದ ಬಗ್ಗೆ ಪ್ರಶ್ನಿಸಿ ಲೆಟರ್ ಕೊಡಿ ಎಂದು ಪಟ್ಟು ಹಿಡಿದರೂ ಬ್ಯಾಂಕ್ ನಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ನೊಂದು ಕೆನರಾ ಬ್ಯಾಂಕ್ ನ ಒಳಗಡೆ ಮೌನ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

