
ಕೆಲ ದಿನಗಳಿಂದ ಕುಮಾರ ಪರ್ವತ ತಪ್ಪಿಲಿನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದಿದೆ. ಗುರುವಾರ ಸಂಜೆ ಸುಮಾರು ಎರಡು ಗಂಟೆ ಕಾಲ ಕೊಲ್ಲಮೊಗ್ರ, ಕಲ್ಮಕಾರು, ಸುಬ್ರಹ್ಮಣ್ಯ, ಏನೆಕಲ್ ಮೊದಲಾದ ಕೆಲವು ಕಡೆ ಭಾರೀ ಮಳೆ ಸುರಿದಿದೆ.



ಕೊಲ್ಲ ಮೊಗ್ರ, ಕಲ್ಮಕಾರು ಭಾಗದಲ್ಲಿ ಕಳೆದ ವರ್ಷಗಳ ಜಲಪ್ರಳಯದ ರೀತಿಯಲ್ಲಿ ಒಮ್ಮಿಂದೊಮ್ಮೆಗೆ ನೆರೆ ನೀರು ಹರಿದಿದ್ದು ಕೊಲ್ಲಮೊಗ್ರು ಗ್ರಾಮದ ಪನ್ನೆ ಬಳಿ ಪಿಕ್ ಅಪ್ ವಾಹನ ಹೊಳೆ ಯಲ್ಲಿ ಕೊಚ್ಚಿಕೊಂಡು ಹೋಗಿ ನೀರು ಪಾಲಾದ ಘಟನೆ ನಡೆದಿದೆ.

ವಾಹನದಲ್ಲಿದ್ದ ಸಾವಿರಾರು ತೆಂಗಿನಕಾಯಿ ನೀರು ಪಾಲಾಗಿದೆ ಎನ್ನಲಾಗಿದೆ . ರಾಮಕೃಷ್ಣ ಕೊತ್ನಡ್ಕ ಅವರ ಮನೆಯಿಂದ ತೆಂಗಿನಕಾಯಿ ತುಂಬಿಸಿಕೊಂಡು ಬರುವಾಗ ಪನ್ನೆ ಬಳಿಯ ಮಡಿವಾಳ ಮೂಲೆ ಎಂಬ ನೀರಿನ ಹರಿವು ಹೆಚ್ಚಾಗಿತ್ತು. ನದಿ ದಾಟುತಿದ್ದಂತೆ ಒಮ್ಮೆಲೆ ನೀರು ಹರಿದಿದ್ದು ಸಾಹಸದಿಂದ ಪಿಕ್ ಅಪ್ ದಾಟಿಸಿದಾಗ ವಾಹನ ನೀರುಪಾಲಾಗಿದೆ.
