ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು

ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು

ನೆಲ್ಯಾಡಿ : ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನೆಲ್ಯಾಡಿಯ ಯುವಕ ಬೈಕ್ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ನೇರಿಯಾ ಎಂಬವರ ಪುತ್ರ ಥೋಮಸ್ ಮೃತಪಟ್ಟ ಯುವಕ.

ಥೋಮಸ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಮನೆಯಿಂದ ಬೆಂಗಳೂರಿಗೆ ಬೈಕ್‍ ನಲ್ಲಿ ತೆರಳಿದ್ದು, ನೆಲಮಂಗಲ ಸಮೀಪಿಸುತ್ತಿದ್ದಂತೆ ಅಪಘಾತ ಸಂಭವಿಸಿದೆ. ಲಾರಿಯಡಿಗೆ ಬಿದ್ದ ಥೋಮಸ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ರಾಜ್ಯ