ಕನ್ನಡ ಮತ್ತು ತುಳು ಸಿನಿಮಾಗಳ ಓಟಿಟಿ ಪ್ಲಾಟ್ ಫಾರ್ಮ್ ಟಾಕೀಸ್ ಆ್ಯಪ್ ನಡೆಸುವ ಕಿರುಚಿತ್ರೋತ್ಸವದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ದಿಸಲಿದೆ ಅರೆಭಾಷೆಯ ಕಿರುಚಿತ್ರ ಕೋಲ. ಟಾಕೀಸ್ ಆ್ಯಪ್ ನ ಸ್ಪರ್ಧೆಯ ಎಲ್ಲಾ ವಿಭಾಗದಲ್ಲೂ ಈ ಕಿರು ಚಿತ್ರ ಸ್ಪರ್ದಿಸಲಿದೆ. ಹವಿನ್ ಗುಂಡ್ಯ ಕಥೆ ಬರೆದು ನಿರ್ದೇಶಿಸಿದ ಈ ಕಿರು ಚಿತ್ರಕ್ಕೆ ಅರವಿಂದ್ ಜಯಸೂರ್ಯ ಹಿನ್ನಲೆ ಸಂಗೀತ ನಿರ್ದೇಶನ ಮಾಡಿದ್ದು ಸಂದೇಶ್ ನಾಯಕ್ ಛಾಯಗ್ರಹಣ, ರಾಜ್ ಮುಖೇಶ್ ಕಲಾ ನಿರ್ದೇಶಕರಾಗಿ, ಕೌಶಿಕ್ ಕೊಡಿ ಡಬ್ಬಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಜೀವನ್ ರಾಂ ಸುಳ್ಯ, ಗಂಗಾಧರ ನೆಲ್ಲಿಕೊಡಿ,ವಿನೋದ್, ತ್ರಿಶೂಲ್, ಸಂತೋಷ್ ನಾಯರ್, ಜಯಪ್ರಕಾಶ್,ಸುಳ್ಯ ಬಾಯ್ಸ್ ಮುಂತಾದ ಕಲಾವಿದರು ನಟಿಸಿದ್ದಾರೆ.ಇದೀಗ ಟಾಕೀಸ್ ಆ್ಯಪ್ ನಲ್ಲಿ ಉಚಿತವಾಗಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ ಎಂದು ಚಿತ್ರದ ನಿರ್ದೇಶಕ ಹವಿನ್ ಗುಂಡ್ಯ ನ್ಯೂಸ್ ರೂಮ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

