
: ಅಪರಿಚಿತನೊಬ್ಬನನ್ನು ನಂಬಿ ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆ ಹೂಡಿಕೆ ಮಾಡಿದ ಉಪ್ಪಿನಂಗಡಿ ಬಳಿಯ ಇಚ್ಲಂಪಾಡಿ ನಿವಾಸಿ ವ್ಯಕ್ತಿಯೊಬ್ಬ ಒಂದು ಕೋಟಿ ರೂ.ಗೂ ಅಧಿಕ ದುಡ್ಡು ಕಳಕೊಂಡ ಘಟನೆ ನಡೆದಿದೆ.

ಇಚ್ಲಂಪಾಡಿ ಗ್ರಾಮದ ಕೆಡೆಂಬೈಲು ಪುಲಿಕ್ಕಲ್ ನಿವಾಸಿ 43ವರ್ಷದ ವ್ಯಕ್ತಿ ಹಣ ಕಳಕೊಂಡವರು. ಮೇ 25ರಂದು ಟೆಲಿಗ್ರಾಮ್ ನಲ್ಲಿ ಅಪರಿಚಿತನೊಬ್ಬ ಪರಿಚಯವಾಗಿದ್ದಾನೆ. ಆತ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ನಂಬಿಸಿದ್ದಾನೆ. ಅದರಂತೆ, ಅಮೆರಿಕದ ಕ್ರಿಪ್ಟೋ ಕರೆನ್ಸಿಗೆ ಹಣ ಹೂಡಿಕೆ ಮಾಡಲು ಬಿನೇನ್ಸ್ ಆ್ಯಪ್ ಮತ್ತು ಡಿಫೈ ಆ್ಯಪ್ ಡೌನ್ಲೋಡ್ ಮಾಡುವಂತೆ ತಿಳಿಸಿದ್ದಾನೆ. ಬಳಿಕ ಖಾತೆಯಿಂದ ಹಣ ತನ್ನಿಂದ ತಾನೆಯಾಗಿ ರವಾನೆಯಾಗಿದೆ.ಇತ್ತೀಚೆಗೆ ಅಪರಿಚಿತ ವ್ಯಕ್ತಿಗಳೂ ಈ ರೀತಿಯ ವ್ಯಕ್ತಿಗಳು ಎಲ್ಲರ ವ್ಯಾಟ್ಸಪ್ ಗಳಿಗೂ ಗ್ರೂಪ್ ಹರಿಯ ಬಿಡುತ್ತಿದ್ದಾರೆ.
