
ಇನ್ನೇನು ಶಾಲಾ ಆರಂಭದ ದಿನ ಬಂದೇ ಬಿಟ್ಟಿತು.., ಪ್ರತೀ ಪೋಷಕರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಹೆಚ್ಚು ಅಂಕ ಗಳಿಸಬೇಕು ಡಿಸ್ಟ್ರಿಂಕ್ಷನ್ ನಲ್ಲಿ ಉತ್ತೀರ್ಣವಾಗಬೇಕು , ನೆರೆಹೊರೆಯವರು ನಮ್ಮ ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಬೇಕು ಎನ್ನುವ ಆಸೆ ಮತ್ತು ಆಲೋಚನೆ ಇದ್ದೇ ಇರುತ್ತದೆ, ಹಾಗಾಗಿ ತಮಗೆ ಆರ್ಥಿಕವಾಗಿ ಕಷ್ಟವಾದರೂ ಸಹಿಸಿಕೊಂಡು ಉತ್ತಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರ್ಪಡೆ ಮಾಡುತ್ತಾರೆ.


ಆದರೆ ಪೋಷಕರು ತಮ್ಮ ಈ ಕನಸುಗಳನ್ನು ಪೂರೈಸಲು ಮಕ್ಕಳನ್ನು ಶಾಲೆಯ ಜೊತೆಗೆ ಟ್ಯೂಷನ್ ಗೆ ಕಳಿಸಬೇಕಾದ ಅನಿವಾರ್ಯವಿದೆ. ಈ ಹಂತದಲ್ಲಿ ಪೋಷಕರನ್ನು ಕಾಡುವ ಪ್ರಶ್ನೆಯೆಂದರೆ ನಾವು ಯಾವ ಟ್ಯೂಷನ್ ಸೆಂಟರ್ ಗೆ ಸೇರಿಸುವುದು ಎಂದು .. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ವೆಂಬಂತೆ , ಸುಳ್ಯದಲ್ಲಿ ನುರಿತ ಶಿಕ್ಷಕರಿಂದ ನಡೆಸಲ್ಪಡುವ ಟ್ಯೂಷನ್ ಸೆಂಟರ್ ನಲ್ಲಿ ದಾಖಲಾತಿ ಆರಂಭಗೊಂಡಿದೆ, ಸುಳ್ಯದ ರಥ ಬೀದಿಯಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಒಂದುವರ್ಷಗಳಿಂದ ಆರಂಭವಾಗಿರುವ “ಯೂನಿಕ್ ಅಕಾಡೆಮಿ”ಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿ ಕೊಡಲಾಗುತ್ತದೆ, ಅಲ್ಲದೆ ಪಿ ಯು ಸಿ ವಿದ್ಯಾರ್ಥಿಗಳಿಗಾಗಿ ಸೈನ್ಸ್, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮ್ಯಾಥ್ಸ್, ಹಾಗೂ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಬ್ರೈನ್ ಡೆವಲೆಪ್ಮೆಂಟ್ ವಿಷಯಗಳಾದ, ಅಬಕಾಸ್ , ವೇದಿಕ್ ಮ್ಯಾಥ್ಸ್, ಸಾಮಾನ್ಯ ಜ್ಞಾನ , ಚೆಸ್ ಮೊದಲಾದವುಗಳನ್ನು ಹೇಳಿಕೊಡಲಾಗುತ್ತದೆ, ಅಲ್ಲದೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ NEET / JEE / CET / ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶಕ್ಕೆ ತರಬೇತಿಯನ್ನು ನೀಡಲಾಗುತ್ತದೆ, ಎಂದು ಸಂಸ್ಥೆಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಇಲ್ಲಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡಲು 8197113100 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

