Scam Alert: ಮೊಬೈಲ್ ಬಳಕೆದಾರರೇ ಹುಷಾರ್

Scam Alert: ಮೊಬೈಲ್ ಬಳಕೆದಾರರೇ ಹುಷಾರ್

 ಇದೀಗ ಮೊಬೈಲ್ ಬಳಕೆ ಹಾಗೂ ಡಿಜಿಟಲೀಕರಣ ವಾಗಿರುವುದರಿಂದ ಎಲ್ಲವೂ ಆನ್ ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ. ಅಷ್ಟೆ ಅಲ್ಲದೆ ಆನ್ ಲೈನ್ ವಂಚಕರು ಕೂಡ ಜಾಸ್ತಿಯಾಗಿದೆ. ಆನ್ ಲೈನ್ ವಂಚನೆ ಬಗ್ಗೆ ಕರ್ನಾಟಕ ಪೊಲೀಸರು ಮಹತ್ವದ ಮಾಹಿತಿಯನ್ನು ನೀಡಿದ್ದು, ಸಾರ್ವಜನೀಕರು ಈ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ತಿಳಿಸಿದ್ದಾರೆ. ಹಾಗಾದರೆ ಯಾವ, ಮಾಹಿತಿ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಆನ್ ಲೈನ್ ವಂಚಕರು ಜನರನ್ನು ವಂಚಿಸೋದಕ್ಕೆ ವಿವಿಧ ದಾರಿಗಳನ್ನು ಹಿಡಿಯುತ್ತಿದ್ದಾರೆ. ಈಗ ಹೊಸದೊಂದು ದಾರಿ ಕಂಡುಕೊಂಡಿರುವಂತ ವಂಚಕರು, ನಿಮ್ಮ ಮೊಬೈಲ್ ಗಳಿಗೆ ಮೆಸೇಜ್ ಕಳುಹಿಸಿಕೊಡುತ್ತಿದ್ದು, ಒಂದು ವೇಳೆ ನೀವು ಓಪನ್ ಮಾಡಿದ್ದೇ ಆದಲ್ಲಿ, ನಿಮ್ಮ ಬ್ಯಾಂಕ್ ಖಾತೆ ಸೈಬರ್ ವಂಚಕರ ಪಾಲಾಗೇ ಬಿಡುತ್ತೆ.

ವಂಚಕರು RAT (Remote access tool) ಗಳ ಸಹಾಯದಿಂದ APK file ಅಥವಾ App ಸಿದ್ಧಪಡಿಸಿ, WhatsApp ಅಥವಾ text message ಮುಖಾಂತರ ಬ್ಯಾಂಕ್‌ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿಕೊಡುತ್ತಿದ್ದು, ಅದನ್ನು ಓಪನ್ ಮಾಡಿದ್ದೇ ಆದಲ್ಲಿ ಸಾರ್ವಜನಿಕರಿಗೆ ಬರುವ ಎಲ್ಲಾ Text message ಗಳು ವಂಚಕರ ಮೊಬೈಲ್ ಗಳಿಗೆ Automatically, Message forwarding ಆಗುತ್ತಿವೆ ಎಂಬ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇನ್ನೂ ಲಿಂಕ್ ಓಪನ್ ಮಾಡಿದ ಬಳಿಕ ವಂಚಕರು ಸುಲಭವಾಗಿ OTP ಪಡೆದುಕೊಂಡು ಸಾರ್ವಜನಿಕರ ಖಾತೆಗಳಿಗೆ Internet mobile banking application ಗಳನ್ನು ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಸಾರ್ವಜನಿಕರ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಶೇಷವಾಗಿ ಕೆನರಾ ಬ್ಯಾಂಕಿನ ಗ್ರಾಹಕರಿಗೆ ಈ ರೀತಿಯ ತೊಂದರೆ ಆಗುತ್ತಿರುವುದು ಕಂಡುಬರುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.

ಆದ್ದರಿಂದ ಬ್ಯಾಂಕ್‌ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ WhatsApp ಅಥವಾ Text message ಮುಖಾಂತರ ಬರುವ APK file ಅಥವಾ App ಗಳ ಲಿಂಕ್ ಗಳನ್ನು ಕ್ಲಿಕ್ ಮಾಡದಿರಿ, ಒಂದು ವೇಳೆ ನಿರ್ಲಕ್ಷದಿಂದ ಅಂತಹ ಲಿಂಕ್ ಗಳನ್ನು ಕ್ಲಿಕ್ ಮಾಡಿದ್ದಲಿ ತಕ್ಷಣ ತಮ್ಮ ಮೊಬೈಲ್ ನ್ನು Switch off ಮಾಡಿಕೊಂಡು ನಿಮ್ಮ ಬ್ಯಾಂಕ್ ಗೆ ಸಂಪರ್ಕಿಸಿ. ಖಾತೆಯಿಂದ ಹಣ ವರ್ಗಾವಣೆಗೊಂಡಿದ್ದಲಿ Cybercrime Helpline 1930 ಗೆ ಕರೆ ಮಾಡಿ ದೂರು ದಾಖಲಿಸಲು ಕೋರಿದ್ದಾರೆ

ರಾಜ್ಯ