.

ಕಾಸರಗೋಡು: ಪ್ರಿಯಕರನ ಜೊತೆ ವಾಸವಾಗಿದ್ದ ಮಹಿಳೆಯೊಬ್ಬರು ಆತನ ಮನೆಗೆ ಬೆಂಕಿ ಹಚ್ಚಿದ ಘಟನೆ ಪೆರ್ಮುದೆ ಸಮೀಪದ ಮಾಣಿತ್ತಡ್ಕ ಎಂಬಲ್ಲಿ ನಡೆದಿದೆ.


ಮಾಣಿತ್ತಡ್ಕದ ನಯನ ಕುಮಾರ್ ಎಂಬ ವ್ಯಕ್ತಿ ಜೊತೆ ವಾಸವಾಗಿದ್ದ ಉಷಾ ಎನ್ನುವ ಮಹಿಳೆ ಸೋಮವಾರ ರಾತ್ರಿ ದುಷ್ಕೃತ್ಯ ನಡೆಸಿದ್ದಾಳೆ. ಇಬ್ಬರ ನಡುವೆ ಉಂಟಾದ ವೈಮನಸ್ಸು ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.,ಘಟನೆಗೆ ಸಂಬಂಧಪಟ್ಟಂತೆ ಉಷಾ (35) ಎಂಬಾಕೆಯನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಷಾ ವಿವಾಹಿತೆಯಾಗಿದ್ದು, ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ವರ್ಷದ ಹಿಂದೆ ತನ್ನ ಪತಿ , ಮಕ್ಕಳ ನ್ನು ತ್ಯಜಿಸಿ ನಯನ ಕುಮಾರ್ ಜೊತೆ ವಾಸವಾಗಿದ್ದಳು. ಸೋಮವಾರ ರಾತ್ರಿ ನಯನ ಕುಮಾರ್ ನ ತಾಯಿ ಮಾತ್ರ ಮನೆಯಲ್ಲಿದ್ದಾಗ ಸೀಮೆ ಎಣ್ಣೆ ಸುರಿದು ಉಷಾಳು ಮನೆಗೆ ಬೆಂಕಿ ಹಚ್ಚಿದ್ದು, ಮನೆ ಹಾನಿ ಗೊಂಡಿದೆ.
ನಯನ ಕುಮಾರ್ ನ ತಾಯಿ ಮನೆಯಿಂದ ಓಡಿ ಹೋದ ಕಾರಣ ಅಪಾಯ ತಪ್ಪಿದೆ.ಸ್ಥಳಕ್ಕೆ ತಲಪಿದ ಪರಿಸರ ವಾಸಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿ ಸಿದ್ದರು.ನಯನ ಕುಮಾರ್ ನ ತಾಯಿ ನೀಡಿದ ದೂರಿ ನಂತೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಉಷಾಳನ್ನು ಬಂಧಿಸಿದ್ದಾರೆ