ಬೆಳ್ತಂಗಡಿ ಶಾಸಕರ ನಿವಾಸವನ್ನು ಸುತ್ತುವರಿದಿರುವ ಪೋಲಿಸರು: ಕೆಲವೇ ಕ್ಷಣದಲ್ಲಿ ಬಂಧನ ಸಾಧ್ಯತೆ :ಸ್ಥಳಕ್ಕೆ ಅಭಿಮಾನಿಗಳು ದೌಡು

ಬೆಳ್ತಂಗಡಿ ಶಾಸಕರ ನಿವಾಸವನ್ನು ಸುತ್ತುವರಿದಿರುವ ಪೋಲಿಸರು: ಕೆಲವೇ ಕ್ಷಣದಲ್ಲಿ ಬಂಧನ ಸಾಧ್ಯತೆ :ಸ್ಥಳಕ್ಕೆ ಅಭಿಮಾನಿಗಳು ದೌಡು

ಬೆಳ್ತಂಗಡಿ : ಮೇಲಂತಬೆಟ್ಟು ಅಕ್ರಮ ಗಣಿಗಾರಿಕೆ ಆರೋಪದಡಿ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ ಹಿನ್ನೆಲೆ ಪ್ರತಿಭಟನೆ ನಡೆಸಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಪೊಲೀಸ್ ಅಧಿಕಾರಿಗಳು ಇಂದು ಅವರ ಗರ್ಡಾಡಿಯ ನಿವಾಸಕ್ಕೆ ಆಗಮಿಸಿ ಸುತ್ತು ವರಿದಿದ್ದಾರೆ.

ಎರಡು ಪ್ರಕರಣಗಳಲ್ಲಿ ಒಂದು ಪೊಲೀಸ್‌ ಠಾಣೆಗೆ ಅಕ್ರಮ ಪ್ರವೇಶ ಮಾಡಿ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಹಾಗೂ ಇನ್ನೊಂದು ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಪ್ರಕರಣ ದಾಖಲಾಗಿದೆ.

ಪೊಲೀಸರು ಬಂಧನಕ್ಕೆ ಬಂದ ವಿಷಯ ತಿಳಿಯುತ್ತಲೇ ಹಲವಾರು ಕಾರ್ಯಕರ್ತ ಹರೀಶ್ ಪೂಂಜ ನಿವಾಸಕ್ಕೆ ಆಗಮಿಸಿದ್ದಾರೆ.

ರಾಜ್ಯ