ಅಕ್ರಮ ಕಲ್ಲು ಗಣಿಗಾರಿಕೆ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಬಂಧನ:ಬೆಳ್ತಂಗಡಿಯಲ್ಲಿ ಬಿಜೆಪಿ ಪ್ರತಿಭಟನೆ :ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿದ್ರೆ, ಅಂದಿನಂತೆ  ಕೆ.ಜೆ ಹಳ್ಳಿ ಡಿ.ಜೆ ಹಳ್ಳಿ ಘಟನೆ ಮತ್ತೆ ಮರುಕಳಿಸಬಹುದು :ಶಾಸಕ ಹರೀಶ್ ಪೂಂಜಾ

ಅಕ್ರಮ ಕಲ್ಲು ಗಣಿಗಾರಿಕೆ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಬಂಧನ:ಬೆಳ್ತಂಗಡಿಯಲ್ಲಿ ಬಿಜೆಪಿ ಪ್ರತಿಭಟನೆ :ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿದ್ರೆ, ಅಂದಿನಂತೆ  ಕೆ.ಜೆ ಹಳ್ಳಿ ಡಿ.ಜೆ ಹಳ್ಳಿ ಘಟನೆ ಮತ್ತೆ ಮರುಕಳಿಸಬಹುದು :ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಬಂಧನ ಪ್ರಕರಣದಲ್ಲಿ ಆರೋಪಿಯ ಬಿಡುಗಡೆಗೆ ಒತ್ತಡ ಹಾಕಿ ಪೊಲೀಸ್‌ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್.ಐ.ಆರ್. ದಾಖಲಾಗಿತ್ತು ಇಂದು ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಶಾಸಕ ಹರೀಶ್‌ ಪೂಂಜಾರವರು ಪೋಲೀಸ್ ಅಧಿಕಾರಿಗಳು ಹಾಗೂ ತಹಶೀಲ್ದಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆ ವೇಳೆ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ದಿಕ್ಕಾರ ಹಾಕಿದರು. ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಪೊಲೀಸ್‌ ಠಾಣೆಯಲ್ಲಿ ಹರೀಶ್‌ ಪೂಂಜಾರವರು ನಿನ್ನ ಅಮ್ಮೆರ್ನನ ಪೊಲೀಸ್‌ ಸ್ಟೇಷನ್‌ ಎಂದಿದಕ್ಕೆ ಎಫ್‌ಐಆರ್‌ ಹಾಕಿದ್ದಾರೆ. ಹಾಗಾದರೆ ಇದುವೇ ತಹಶಿಲ್ದಾರು ಆಫೀಸಿನ ಎದುರುಗಡೆ ದಿ|ವಸಂತ ಬಂಗೇರರವರು ಭಾಷಣದಲ್ಲಿ ಅವ್ಯಾಚ ಶಬ್ದಗಳನ್ನು ಹೇಳಿದ್ದರು ಆದರೂ ಎಫ್‌ಐಆರ್‌ ಹಾಕಿರಲಿಲ್ಲ, ಹಾಗಾದರೆ ಅಂದು ಅವರು ಹೇಳಿದ ಅವ್ಯಾಚ ಶಬ್ದಗಳನ್ನ ಈ ಪೊಲೀಸ್‌ನವರು ಒಪ್ಪಿಕೊಂಡಿದ್ದಾರೆ ಎಂದರು.

ಬೆಳ್ತಂಗಡಿ ತಾಲೂಕಿನ ತಹಶಿಲ್ದಾರರಿಗೆ ಒಂದು ನನ್ನ ಪ್ರಶ್ನೆ ಅವರು ನನ್ನ ಗೆಳೆಯರಿಬ್ಬರಲ್ಲಿ ಹೇಳಿದ್ರಂತೆ ಬಿಜೆಪಿ ಸರಕಾರ ಇರುವಾಗ ಕುತ್ತಿಗೆ ಹಿಡಿದಂತೆ ಆಗುತಿತು 1ರೂಪಾಯಿಯು ಆಗುತಿರ್ಲಿಲ್ಲ ಈಗ ಕಾಂಗ್ರೆಸ್ ಬಂದ ಮೇಲೆ ಇದು ನನ್ನದೇ ರಾಜ್ಯ ಎಷ್ಟು ಬೇಕಾದರೂ ಅಕ್ರಮ ಮರಳುಗಾರಿಕೆ, ಗಣಿಗಾರಿಕೆಯಲ್ಲಿ ತೆಗೆದುಕೊಳ್ಳಬಹುದು ಅದಕ್ಕೆ ಸಾಕ್ಷಿಯಾಗಿ ಅವರು ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ್ದು, ಬಿಜೆಪಿ ಕಾರ್ಯಕರ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದು ತಪ್ಪೇ ನಾನು ಒಪ್ಪಿಕೊಳ್ಳುತ್ತೇನೆ, ಆದರೆ ಕಾಂಗ್ರೇಸ್‌ ನವರು ಯಾರು ಕೂಡ ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ನಡೆಸುತ್ತಿಲ್ಲವೇ?

ನಾಳೆಯಿಂದ ನೀವು ಕಾಂಗ್ರೇಸ್‌ ಬಿಜೆಪಿ ಎಂದು ನೋಡದೆ ನ್ಯಾಯಯುತವಾಗಿ ಅಕ್ರಮ ಮಾಫಿಯಗಳಿಗೆ ದಾಳಿ ಮಾಡಿ, ನೀವು ಕಾಂಗ್ರೇಸ್‌ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿದ್ರೆ, ಅಂದು ಕೆ.ಜೆ ಹಳ್ಳಿ ಡಿ.ಜೆ ಹಳ್ಳಿಯಲ್ಲಿ ಬ್ಯಾರಿಗಳು ಮಾಡಿದ ಹಾಗೆ ಮಾಡ್ತೇವೆ ಎಂದು ಹರೀಶ್‌ ಪೂಂಜಾ ಹೇಳಿದರು.

ಜಿಲ್ಲಾ ವರಿಷ್ಠಾಧಿಕಾರಿಯವರಿಗೆ ವಿನಂತಿಯನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದೇನೆ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ಮಾಡಿ, ಶಶಿರಾಜ್‌ ಶೆಟ್ಟಿ ಈ ಅಕ್ರಮ ಗಣಿಗಾರಿಕೆಯಲ್ಲಿ ಇದ್ದರೋ ಇಲ್ವೋ ಎಂಬುದನ್ನು ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮ ತೆಗಿದುಕೊಳ್ಳಿ ಹಾಗೂ ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಅಕ್ರಮ ಮಾಫಿಯಗಳ ಬಗ್ಗೆ ಬೆಳ್ತಂಗಡಿ ಪೊಲೀಸರ ಹತ್ತಿರ ವಿಚಾರಿಸಿ ದಾಳಿ ಮಾಡಿ ನಿಮಗೆ ಒಂದು ವಾರದ ಗಡುವು ನೀಡುತ್ತದ್ದೇನೆ ಆ ನಂತರವೂ ಅಕ್ರಮ ಮಾಫಿಯಗಳು ನಡೆಯುತ್ತದ್ದರೆ ನಾನೇ ರೈಡ್‌ ಮಾಡುತ್ತೇನೆ ಆಗ ಅದಕ್ಕೆ ಸಂಬಂಧಪಟ್ಟ ತಹಶಿಲ್ದಾರ್‌, ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕೆಂದು ಹೇಳಿದರು.

ರಾಜ್ಯ