.
ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಉಚಿತ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ:ಕಂಪ್ಯೂಟರ್ ಡಿ.ಟ.ಪಿ ಮೇ 27 ರಿಂದ ಜು.10 ರವರೆಗೆ (45 ದಿನಗಳು). ಮಹಿಳೆಯರ ವಸ್ತ್ರ ವಿನ್ಯಾಸ ಮೇ 30ರಿಂದ ಜೂ 28 ರವರೆಗೆ (3೦ ದಿನಗಳು), ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಜೂ 11 ರಿಂದ ಜು.10 ರವರೆಗೆ (30 ದಿನಗಳು), ಕಂಪ್ಯೂಟರ್ ಟ್ಯಾಲಿ (ಅಕೌಂಟಿಂಗ್) ಜು, 11 ರಿಂದ ಆ. 9 ರವರೆಗೆ (30 ದಿನಗಳು) ಈ ತರಬೇತಿಗಳು ನಡೆಯಲಿದೆ.

ಜೊತೆಗೆ ಮುಂದಿನ ದಿನಗಳಲ್ಲಿ ಮೆನ್ಸ್ ಪಾರ್ಲರ್, ಮೊಬೈಲ್ ಫೋನ್ ರಿಪೇರಿ, ಮೊದಲಾದ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ರುಡ್‌ಸೆಟ್ ಸಂಸ್ಥೆಯ ಇಮೇಲ್ ujirerudseti@gmail.com ಗೆ ಸಲ್ಲಿಸಬಹುದು, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ನಂ.6364561982 ಗೆ ಸಲ್ಲಿಸಬಹುದು. ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು – ನಿರ್ದೇಶಕರು ರುಡ್‌ಸೆಟ್ ಸಂಸ್ಥೆ, ಸಿದ್ದವನ ಉಜಿರೆ, ಇವರಿಗೆ ಕಳುಹಿಸಬಹುದು
