ಮಂಗಳೂರು :ಆಯ ತಪ್ಪಿ ಬೈಕಿನಿಂದ ಬಿದ್ದು ಮಹಿಳೆಯ ದಾರುಣ ಸಾವು.

ಮಂಗಳೂರು :ಆಯ ತಪ್ಪಿ ಬೈಕಿನಿಂದ ಬಿದ್ದು ಮಹಿಳೆಯ ದಾರುಣ ಸಾವು.

ಮಂಗಳೂರು: ಸಹಸವಾರೆ ಮಹಿಳೆಯೊಬ್ಬರು ಬೈಕಿನಿಂದ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗೋರಿಗುಡ್ಡ ನಿವಾಸಿ ಕವಿತಾ (30) ಎಂದು ಗುರುತಿಸಲಾಗಿದೆ.

ಬುಧವಾರ(ಮೇ.15) ರಾತ್ರಿ ಅಭಿಷೇಕ್‌ ಎಂ ಬವರು ಕವಿತಾ ಹಾಗೂ ನವ್ಯಾ (15) ಅವರನ್ನು ಪಲ್ಸರ್‌ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಬಂದು ಗೋರಿಗುಡ್ಡ ವೆಲೆನ್ಸಿಯಾ ಚರ್ಚ್‌ ರಸ್ತೆಯಲ್ಲಿರುವ ತರಕಾರಿ ಅಂಗಡಿಯಿಂದ ಎಳನೀರು ಖರೀದಿಸಿದ್ದರು. ಬಳಿಕ ಅಲ್ಲಿಂದ ಹಿಂತಿರುಗಿ ಮನೆಯ ಕಡೆಗೆ ಹೋಗುತ್ತಿದ್ದಾಗ ಕವಿತಾ ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕದ್ರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ