
ದಕ್ಷಿಣ ಕನ್ನಡ ಜಿಲ್ಲೆ ಹೇಳಿ ಕೇಳಿ ಮುಗ್ಧ ಜನರು ಬದುಕುತ್ತಿರುವ ಊರು , ಇದನ್ನೆ ಬಂಡವಾಳವನ್ನಾಗಿಸಿ ಇದೀಗ ವಂಚಕರ ಜಾಲಗಳು ಅದೃಷ್ಟ ಯೋಜನೆಗಳ ಹೆಸರಿನಲ್ಲಿ ಜನತೆಗೆ ಮುಂಕು ಬೂದಿ ಎರಚಲು ಸುಳ್ಯ, ಪುತ್ತೂರು, ಕಡಬ , ಬಂಟ್ವಾಳ, ಮಂಗಳೂರು,ಬೆಳ್ತಂಗಡಿ ತಾಲೂಕಿನಲ್ಲಿ ಸಿದ್ದವಾಗಿರುವುದು ಬೆಳಕಿಗೆ ಬಂದಿದೆ,


ಕಾರಣ ಅದೃಷ್ಟ ಯೋಜನೆ ಎಂದಾಕ್ಷಣ ಜಿಲ್ಲೆಯ ಜನರು ತಾ ಮುಂದು ನಾ ಮುಂದು ಮುಗಿಬಿದ್ದು ಇದ್ದ ಬದ್ದಾ ಸ್ಕೀಮ್ ಗಳಿಗೆ ಸೇರಿ ಹಣ ಕಳೆದು ಕೊಂಡು ಕಟ್ಟ ಕಡೆಗೆ ಪೋಲಿಸರ ಮೊರೆ ಹೋಗುವ ಹುಟ್ಟುಗುಣ . ಜನರ ಈ ಗುಣವನ್ನೇ ಬಳಸಿ ಅದೃಷ್ಟ ಯೋಜನೆಯ ಹೆಸರಿನಲ್ಲಿ ವಂಚಿಸಲು ಯೋಜನೆ ರೂಪಿತವಾಗಿದೆ ಎಂದು ತಿಳಿದು ಬಂದಿದೆ. ಸುಳ್ಯದ ಗಾಂಧೀನಗರ , ಪುತ್ತೂರು, ಮಂಗಳೂರಿನ,ಕೆಲವು ಆಯಕಟ್ಟಿನ ಜಾಗಗಳಲ್ಲಿ ಕಡಿಮೆ ಬಾಡಿಗೆಗೆ ಕೊಠಡಿಗಳನ್ನು ಪಡೆದು ಒಂದು ಟೇಬಲ್ , ಎರಡು ಚಯರ್, ಹಾಕಿ ಸ್ಕೀಂ ದಂದೆಗೆ ತಂಡಗಳು ಶುರುವಿಟ್ಟಿದ್ದಾರೆ,

ಹತ್ತು ವರ್ಷಗಳ ಹಿಂದೆ ಇದೇ ಜಿಲ್ಲೆಯ ಸುಳ್ಯ ಪುತ್ತೂರು ಮತ್ತು ಕಡಬ , ಬಂಟ್ವಾಳ ತಾಲೂಕಿನಲ್ಲಿ ನೂರಾರು ಸ್ಕೀಂಗಳು ಪ್ರಾರಂಭಗೊಂಡಿದ್ದವು,ವಿವಿಧ ಟ್ರಸ್ಟ್ ಗಳ ಹೆಸರಿನಲ್ಲಿ ಪ್ರತೀ ವಾರ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು, ಬಂದ ಲಾಭದಲ್ಲಿ ಚಿಕ್ಕಾಸನ್ನು ಶಾಲೆಗೋ ಮತ್ಯಾವುದೋ ಸಂಸ್ಥೆಗೆ ಕವಾಟೋ, ಕುರ್ಚಿಗಳೋ, ನೀರಿನ ಟ್ಯಾಂಕ್ ಗಳನ್ನು ನೀಡಿ ತಮ್ಮದು ಸಮಾಜ ಸುಧಾರಕ ಟ್ರಸ್ಟ್ ಎಂದು ಪೋಟೊ ಪೋಸ್ ನೀಡಿ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಪ್ರಕಟಪಡಿಸಿಕೊಂಡಿದ್ದರು,
ಕೊನೆಗೆ ಊರೆಲ್ಲಾ ವಂಚಿಸಿ ಕೋಟ್ಯಾಂತ ಹಣದೊಂದಿಗೆ ರಾತ್ರೋ ರಾತ್ರಿ ಪರಾರಿಯಾಗಿದ್ದರು,ಇದೇ ಸ್ಕೀಂಗಳಲ್ಲಿ ಎಜೆಂಟ್ ರಾಗಿ , ಹಣ ವಂಚಿಸಲು ಸಾಥ್ ನೀಡಿದ್ದ ಕೆಲವರು ಮತ್ತೆ ಇದೀಗ ಅಂತದ್ದೇ ಸನ್ನಿವೇಶ ಮತ್ತೆ ಎದುರಾಗಿಸಲು ಸ್ಕಿಂ ಎಂಬ ಮಾಯಾಜಾಲ ಹೆಣೆದಿದ್ದಾರೆ ಎಂದು ಸಾರ್ವಜನಿಕರು ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ..
ಹೇಗೆ ಮೋಸ..?
ಇನ್ನು ಈ ಸ್ಕೀಂ ಮಾಡುವವರ ಮೊದಲ ಮಿಕಗಳು ಬಡ ಮತ್ತು ಮಧ್ಯಮ ವರ್ಗದವರೇ..ಆದರೆ ಈ ಸ್ಕೀಂ ಉದ್ಘಾಟಿಸಲು ಕರೆಯುವುದು ಮಾತ್ರ ಈ ಸಮಾಜದ ಅತ್ಯಂತ ಶ್ರೀಮಂತ ನನ್ನು ,ಸಮಾಜಿಕ, ರಾಜಕೀಯ ವ್ಯಕ್ತಿಗಳನ್ನು , ಹೀಗೆ ಆರಂಬದಲ್ಲಿಯೇ ಚಿನ್ನ, ಕಾರು, ಬೈಕ್ , ಹಣ, ಗೃಹೋಪಯೋಗಿ ವಸ್ತುಗಳನ್ನು ಮುಂದಿರಿಸಿ ಬಲೆ, ಮುಂಗೈಗೆ ತುಪ್ಪ ಸವರಿ ಹೆಣೆದು ಬಡವರನ್ನು ಸುಲಭವಾಗಿ ವಂಚಿಸಿ ಪರಾರಿಯಾಗುತ್ತಿದ್ದರು.
ಸ್ಕೀಂ ಮಾಡಿ ಜನರ ವಂಚಿಸಲು ಯತ್ನಿಸಿದ್ದವರ ಹೆಡೆಮುರಿಗಟ್ಟಿದ್ದ ಪೋಲಿಸ್ ಇಲಾಖೆ.
ಸುಳ್ಯ ಪುತ್ತೂರುಗಳಲ್ಲಿ ಅದೃಷ್ಟ ಯೋಜನೆಗನ್ನು ಆಯೋಜಿಸಿ ಜನರ ಬಳಿ ವಾರ ವಾರ ಲಕ್ಕಿ ಡ್ರಾ ಹೆಸರಲ್ಲಿ ವಂಚನೆಮಾಡುತ್ತಿದ್ದವರ ಕಾರ್ಯಚಟುವಟಿಕೆಯನ್ನು ಪೋಲಿಸ್ ಇಲಾಖೆ ಅಂದು ಸ್ಥಗಿತಗೊಳಿಸಿತ್ತು, ನಂತರ ದಿನಗಳಲ್ಲಿ ಯಾವುದೇ ಅಕ್ರಮ ಅದೃಷ್ಟ ಯೋಜನೆ ನಡೆಸಲು ಬಿಟ್ಟಿರಲಿಲ್ಲ, ಇದೀಗ ಮತ್ತೆ ವಂಚಕರು ಅದೃಷ್ಟ ಯೋಜನೆ ಹೆಸರಿನಲ್ಲಿ ಮತ್ತೆ ವಂಚನೆಗೆ ಇಳಿದಿದ್ದು, ಇದೀಗ ಪೋಲಿಸರು ಬಡ ಜನರು ಈ ವಂಚನಾ ಜಾಲದಿಂದ ಪಾರು ಮಾಡಬೇಕಾಗಿದೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.
