
ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರಾಣ-ಪ್ರತಿಷ್ಠೆಗೆ ‘ಮುಹೂರ್ತ’ವನ್ನು ನಿರ್ಧರಿಸಿದ ಪಂಡಿತ್ ಗಣೇಶ್ವರ ಶಾಸ್ತ್ರಿ ಜೊತೆಗೆ ನಾಲ್ವರು ಹಾಜರಿದ್ದರು. ಇನ್ನು ಬೈಜನಾಥ್ ಪಟೇಲ್ ಸಮುದಾಯದ ಆರ್ಎಸ್ಎಸ್ ಸ್ವಯಂಸೇವಕ, ಒಬಿಸಿ ಸಮುದಾಯದ ಲಾಲ್ಚಂದ್ ಕುಶ್ವಾಹಾ ಮತ್ತು ದಲಿತ ಸಮುದಾಯದ ಸಂಜಯ್ ಸೋಂಕರ್ ಸಹ ಇದೇ ವೇಳೆ ಮೋದಿ ಜೊತೆಗೆ ಉಪಸ್ಥಿತರಿದ್ದರು.
