
ಹಳೆ ವಿದ್ಯಾರ್ಥಿ ಸಂಘ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ವತಿಯಿಂದ 2023-24ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳ ನ್ನು ಗೌರವಿಸಲಾಯಿತು.


ಶೇ 93.12 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದ ಕು.ರೇಣುಕಾ.ಎನ್ ಳಿಗೆ ರೂ.5,000.00,ಶೇ 88.96 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ ಕು.ದೀಪ್ತಿ.ಪಿ ಳಿಗೆ ರೂ 3,000.00 ಹಾಗೂ ಶೇ 88.16 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ ಕು.ಶ್ರೀಹಸ್ತಾ .ಕೆ.ಎಸ್ ಳಿಗೆ ರೂ 2,000.00 ನಗದು ಬಹುಮಾನ ನೀಡಿ ಸಂಘದ ವತಿಯಿಂದ ಗೌರವಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಲಾಯಿತು

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತೇಜಸ್ವಿ ಕಡಪಳ , ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ನಿರಂಜನ ಕೋಡ್ತುಗುಳಿ ನಿರ್ದೇಶಕರಾದ ಉಮೇಶ್ ಚಿಲ್ಪಾರು,ಅನಿಲ್ ಪೂಜಾರಿಮನೆ ಹಾಗೂ ವೆಂಕಟ್ರಮಣ ಇಟ್ಟಿಗುಂಡಿ ಉಪಸ್ಥಿತರಿದ್ದರು..

