ಕೊಡಗಿನ ಶಾಲೆಯಿಂದ ಏಕಾಂಗಿಯಾಗಿ SSLC ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದ ಬಾಲಕಿಯ ಬರ್ಭರ ಕೊಲೆ.ನಿನ್ನೆ ಸಂತೋಷದ ಸುದ್ದಿಯಾಗಿದ್ದ ಬಾಲಕಿಯ ಬದುಕಿನ ದುರಂತ ಅಂತ್ಯ

ಕೊಡಗಿನ ಶಾಲೆಯಿಂದ ಏಕಾಂಗಿಯಾಗಿ SSLC ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದ ಬಾಲಕಿಯ ಬರ್ಭರ ಕೊಲೆ.ನಿನ್ನೆ ಸಂತೋಷದ ಸುದ್ದಿಯಾಗಿದ್ದ ಬಾಲಕಿಯ ಬದುಕಿನ ದುರಂತ ಅಂತ್ಯ

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಹೊರಟ ಆರೋಪಿಯ ಕೈಯಿಂದ ಬಾಲಕಿಯನ್ನು  ಪೋಲಿಸರು ರಕ್ಷಣೆ  ಮಾಡಿದ ಬಳಿಕ ಅದೇ ಬಾಲಕಿಯನ್ನು  ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.ಈಕೆಯ ಬಗ್ಗೆ ನಿನ್ನೆಯಷ್ಟೇ ವರದಿ ಮಾಡಿದ್ದೆವು ಈಕೆ  ಸೂರ್ಲಬ್ಬಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರಿಕ್ಷೆ ಬರೆದ ಏಕಾಂಗಿ ವಿದ್ಯಾರ್ಥಿನಿ.

ವಿರೂಪಾಕ್ಷ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಮೀನಾ ಕೊಲೆಯಾಗಿರುವ ಬಾಲಕಿ. ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ರದ್ದಾಗಿದ್ದರೆ ಸಂಜೆ ವೇಳೆ ಆಕೆಯ ಮನೆಗೆ ನುಗ್ಗಿದ ಆರೋಪಿ ವಿರೂಪಾಕ್ಷ ಆಕೆಯನ್ನು ಎಳೆದೊಯ್ದು ಕತ್ತು ಕೊಯ್ದು ದೇಹವನ್ನು ಬಿಸಾಡಿ ರುಂಡ ಕೊಂಡೊಯ್ದಿದ್ದಾನೆ.

ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮದುವೆ ರದ್ದು ಮಾಡಲಾಗಿತ್ತು.. ಪೊಲೀಸರೇ ಮುಂದೆ ನಿಂತು ಮದುವೆಯನ್ನು ಕೊನೆಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಆಕೆಯನ್ನು ಎಳೆದೊಯ್ದ ಆರೋಪಿ ಕೊಲೆ ಮಾಡಿದ್ದಾನೆ.

ಬಾಲಕಿಯನ್ನು ಆರೋಪಿ ವಿರೂಪಾಕ್ಷ ಪ್ರೀತಿಸುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದಾತ ಮನೆಯವರಿಗೆ ಹಲ್ಲೆ ಮಾಡಿಬಾಲಕಿಯನ್ನು ಅಲ್ಲಿಂದ ಎಳೆದೊಯ್ದಿದ್ದ. ಬಳಿಕ ಕತ್ತು ಕತ್ತರಿಸಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ರಾಜ್ಯ