ಅಕ್ಷಯ ತೃತೀಯದಂದು  ಚಿನ್ನ ಖರೀದಿಯ ಯೋಚನೆ  ಮಾಡಿದ್ದೀರಲ್ವಾ ..?

ಅಕ್ಷಯ ತೃತೀಯದಂದು  ಚಿನ್ನ ಖರೀದಿಯ ಯೋಚನೆ  ಮಾಡಿದ್ದೀರಲ್ವಾ ..?

 

ಪ್ರತಿ ವರ್ಷ ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಹಿಂದೂ ಧರ್ಮದಲ್ಲಿ, ಅಕ್ಷಯ ತೃತೀಯ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ.ಈ ಶುಭದಿನದಂದು ಸುಳ್ಯ ಮತ್ತು ಇಲ್ಲಿನ ಆಸುಪಾಸಿನವರಿಗೆ ಅಪೂರ್ವ ಅವಕಾಶ ಒದಗಿ ಬಂದಿದೆ ಅದೇನೆಂದ್ರೆ  , ಸುಳ್ಯದ ಪೋಲೀಸ್ ಠಾಣೆಯ ಮುಂಬಾಗ ಇತ್ತೀಚೆಗಷ್ಟೆ ಶುಭಾರಂಭ ಗೊಂಡಿರುವ ಕಾಸರಗೋಡಿನಲ್ಲಿ ಕಳೆದ 43 ವರ್ಷಗಳಿಂದ ಚಿನ್ನಾಭರಣ ಹಾಗೂ ವಜ್ರಾಭರಣಗಳ ವ್ಯಾಪಾರ ನಡೆಸುತ್ತಿರುವ  ಬಿಂದು ಜ್ಯುವೆಲ್ಲರಿ ಚಿನ್ನ ಖರೀರಿ ಮಾಡುವವರಿಗೆ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಬಯಸಿದೆ, ನೀವು ಖರೀದಿಸುವ ಪ್ರತೀ ಗ್ರಾಂ ಚಿನ್ನಕ್ಕೂ ಅಷ್ಟೇ ತೂಕದ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡುವುದಾಗಿ ಬಿಂಧು ಜ್ಯುವೆಲ್ಲರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಷಯ ತೃತೀಯ ಮಹತ್ವ:

ಅಕ್ಷಯ ತೃತೀಯ ಅರ್ಥದ ಕುರಿತು ಮಾತನಾಡುತ್ತಾ, ಅಕ್ಷಯ ಎಂದರೆ ಅದು ಎಂದಿಗೂ ಖಾಲಿಯಾಗದ ಅಥವಾ ನಾಶವಾಗದ ಎಂಬರ್ಥವನ್ನು ನೀಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನೀವು ದೀರ್ಘಕಾಲದವರೆಗೆ ಕೆಲವು ಶುಭ ಕಾರ್ಯಗಳನ್ನು ಮಾಡಲು ಯೋಚಿಸುತ್ತಿದ್ದರೆ, ಅಕ್ಷಯ ತೃತೀಯಕ್ಕಿಂತ ಉತ್ತಮವಾದ ದಿನ ಮತ್ತೊಂದಿಲ್ಲ ಎಂದು ಹೇಳಲಾಗುತ್ತದೆ. ಈ ದಿನದಂದು ಶುಭ ಕಾರ್ಯವನ್ನು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ. ಹಾಗೂ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಕುಟುಂಬದ ಮೇಲೆ ಇರುತ್ತದೆ.

ಅಕ್ಷಯ ತೃತೀಯ ದಿನದಂದು ಸತ್ಯಯುಗ ಮತ್ತು ತ್ರೇತಾಯುಗ ಪ್ರಾರಂಭವಾಯಿತು ಮತ್ತು ಈ ದಿನದಂದು ದ್ವಾಪರ ಯುಗದ ಅವಧಿಯು ಕೊನೆಗೊಂಡಿತು ಎಂದು ಹೇಳಲಾಗುತ್ತದೆ. ಈ ದಿನದಿಂದ ದ್ವಾಪರ ಅಂತ್ಯದೊಂದಿಗೆ ಕಲಿಯುಗ ಪ್ರಾರಂಭವಾಯಿತು. ಧಾರ್ಮಿಕ ಗ್ರಂಥಗಳಲ್ಲಿ ಅಕ್ಷಯ ತೃತೀಯವನ್ನು ಯುಗಾದಿ ತಿಥಿ ಎಂದೂ ಹೇಳಲಾಗಿದೆ.

ರಾಜ್ಯ