.

ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, 2,28,763 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಆದರೆ ಫೇಲ್ ಆದ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯುವ ಮೂಲಕ ಪಾಸ್ ಮಾಡಬಹುದಾಗಿದೆ

ಇಲಾಖೆ SSLC ಪರೀಕ್ಷೆ ಫಲಿತಾಂಶದ ಬೆನ್ನಲ್ಲೇ ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದೆ. ಜೂನ್ 07 ರಿಂದ ಪರೀಕ್ಷೆ- 2 ಆರಂಭಗೊಳ್ಳಲಿದೆ.
ಭಾಷೆ ಮತ್ತು ದಿನಾಂಕ:
ಜೂನ್ 07 ಶುಕ್ರವಾರ : ಪ್ರಥಮ ಮತ್ತು ತೃತೀಯ ಭಾಷೆ
ಜೂನ್ 8 ಶನಿವಾರ : NSQF( ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ ಇತರೆ)
ಜೂನ್ 10 ಸೋಮವಾರ : ಕೋರ್ ಸಬ್ಜೆಕ್ಟ್ (ಗಣಿತ, ಸಮಾಜ ವಿಜ್ಞಾನ)
ಜೂನ್ 11 ಮಂಗಳವಾರ : ಅರ್ಥಶಾಸ್ತ್ರ
ಜೂನ್ 12 ಬುಧವಾರ : ವಿಜ್ಞಾನ, ರಾಜ್ಯಶಾಸ್ತ್ರ
ಜೂನ್ 13 ಗುರುವಾರ : ದ್ವಿತೀಯ ಭಾಷೆ (ಕನ್ನಡ, ಇಂಗ್ಲಿಷ್)
ಜೂನ್ 14 ಶುಕ್ರವಾರ : ಸಮಾಜಶಾಸ್ತ್ರ
ಪರೀಕ್ಷಾ ಅವಧಿ: ಬೆಳಗ್ಗೆ 10:15 ರಿಂದ ಮಧ್ಯಾಹ್ನ 01:15
ವಿದ್ಯಾರ್ಥಿಗಳಿಗೆ ಒಟ್ಟು 3 ಗಂಟೆ 15 ನಿಮಿಷಗಳ ಕಾಲವಕಾಶ ನೀಡಲಾಗಿದೆ. ಇನ್ನು ಶಿಕ್ಷಣ ಇಲಾಖೆ ಪರೀಕ್ಷೆ ಫೇಲ್ ಆದವರಿಗೆ ಮೂರು ಬಾರಿ ಪಾಸ್ ಮಾಡಲು ಅವಕಾಶ ನೀಡುತ್ತಿದೆ.
