.

ಅರಂತೋಡು: ಅಣ್ಣ ನಿಧನರಾದ ವಿಷಯ ತಿಳಿದು ತಮ್ಮನು ಕುಸಿದು ಬಿದ್ದು ಮೃತಪಟ್ಟ ಧಾರುನ ಘಟನೆ ಇಂದು ನಡೆದಿದೆ. ಅರಂತೋಡು ಗ್ರಾಮದ ನಿವಾಸಿ ಅಬ್ದುಲ್ಲ ರವರು (82) ರವರು ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಈ ವಿಷಯ ತಿಳಿಯುತಿದ್ದಂತೆ ಸಹೋದರ ಉದಯನಗರದ ನಿವಾಸಿ ಮಹಮ್ಮದ್ (76) ಅವರು ಮನೆಯಲ್ಲಿ ಕುಸಿದುಬಿದ್ದರು.ಮನೆಯವರು ತಕ್ಷಣ ಮಹಮ್ಮದ್ ರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಆ ವೇಳೆಗೆ ಮಹಮ್ಮದ್ ರವರು ಮೃತಪಟ್ಟರೆಂದು ತಿಳಿದುಬಂದಿದ್ದು ಈ ಮುಲಕ ಸಹೋದರರು ಈರ್ವರು ಕೂಡ ಜೊತೆಯಾಗಿ ಇಹಲೋಕ ತ್ಯಜಿಸಿದರು.


ಸಹೋದರರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.