140 ಕೋಟಿ ಆದಾಯದ ದೇವಸ್ಥಾನದಲ್ಲಿ ಭಕ್ತರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲವೇ!!

140 ಕೋಟಿ ಆದಾಯದ ದೇವಸ್ಥಾನದಲ್ಲಿ ಭಕ್ತರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲವೇ!!

ಸುಬ್ರಹ್ಮಣ್ಯ: ಎ.27.ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ರಜಾ ದಿನವಾದ ಶನಿವಾರ ರಾತ್ರಿ ಭಕ್ತರು ದೇವಸ್ತಾನದ ಎದುರು ಇರುವ ವೃತ್ತದಲ್ಲಿ ಮಲಗಿರುವ ದೃಶ್ಯ ಕಂಡುಬಂದಿದೆ.

ಕ್ಷೇತ್ರದಲ್ಲಿ ವಸತಿ ಸಮಸ್ಯೆ ಕಾಡುತ್ತಿದೆಯೇ ಎಂಬ ಚರ್ಚೆ ವ್ಯಾಪಕವಾಗಿ ಕೇಳಿಬರುತ್ತಿದೆ.

ಪ್ರಸ್ತುತ ಶಾಲಾ-ಕಾಲೇಜುಗಳಿಗೆ ರಜಾ ದಿನವಾಗಿದ್ದು, ಜತೆಗೆ ಸರಣಿ ಸರಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದರು. ಇದೇ ಕಾರಣದಿಂದ ಕ್ಷೇತ್ರದ ವಸತಿ ಕೊರತೆ ಎದುರಾಗಿ ಭಕ್ತರು ವೃತ್ತ (ಸರ್ಕಲ್ )ನಲ್ಲಿ ಮಲಗಿದ್ದು ಕಂಡುಬಂದಿದೆ.

ಇತ್ತೀಚೆಗೆ ಮತ್ತೆ ವಸತಿ ಸಮಸ್ಯೆ ಉಂಟಾಗಿದೆಯೋ?

ಈ ಮೊದಲು ಭಕ್ತರು ರಸ್ತೆ, ಸಭಾಂಗಣದಲ್ಲಿ ಮಲಗಿದ್ದ ದೃಶ್ಯವೂ ವೈರಲ್‌ ಆಗಿತ್ತು. ವಸತಿ ಕೊಠಡಿ ಲಭ್ಯವಾಗದ ಭಕ್ತರಿಗೆ ಮಲಗಲು ದೇವಳದ ವತಿಯಿಂದ ಬದಲಿ ವ್ಯವಸ್ಥೆ ಮಾಡಲಾಗಿದ್ದರೂ ಮಾಹಿತಿ ಕೊರತೆಯಿಂದ ಭಕ್ತರು ರಸ್ತೆಯಲ್ಲಿ, ವೃತ್ತದಲ್ಲಿ ಮಲಗುತ್ತಿದ್ದರು.

ಇದೀಗ ಅದೇರೀತಿಯ ಸಮಸ್ಯೆ ಎದುರಾಗಿದ್ದು ಭಕ್ತರು ರಸ್ತೆಯಲ್ಲಿ ದೇವಸ್ಥಾನದ ಎದುರು ವೃತ್ತದಲ್ಲಿ ಮಲಗುತ್ತಿದ್ದಾರೆ.

ಈ ಬಗ್ಗೆ ದೇವಸ್ಥಾನದ ಆಡಳಿತ ಅಧಿಕಾರಿಗಳು ಗಮನ ಹರಿಸಬೇಕು, ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ, ರಾತ್ರಿ ತಂಗಲು ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಭಕ್ತರು ಮಾಧ್ಯಮದ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

ವರದಿ : ಶಿವಭಟ್ ಸುಬ್ರಹ್ಮಣ್ಯ

ರಾಜ್ಯ