ಬೊಳುಬೈಲು ಬೈಕ್ ಕಾರು ಡಿಕ್ಕಿ ಇಬ್ಬರಿಗೆ ಗಾಯ: ನಜ್ಜುಗುಜ್ಜಾದ ವಾಹನಗಳು.

ಬೊಳುಬೈಲು ಬೈಕ್ ಕಾರು ಡಿಕ್ಕಿ ಇಬ್ಬರಿಗೆ ಗಾಯ: ನಜ್ಜುಗುಜ್ಜಾದ ವಾಹನಗಳು.

ಮಾಣಿ ಮೈಸೂರು ಹೆದ್ದಾರಿಯ ಸುಳ್ಯ ನಗರದ ಸಮೀಪ ಬೊಳುಬೈಲಿನಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಂಭೀರ ಗಾಯವಾದ ಘಟನೆಎ.29 ಸಂಜೆ ವರದಿಯಾಗಿದೆ, ಬೆಂಗಳೂರು ರಿಜಿಸ್ಟ್ರೇಷನ್ ಹೊಂದಿದ  KA 03 MB 8635  ಹೋಂಡಾಕಾರು ಮತ್ತು KA 19 HJ 4601  ಬೈಕ್ ನಡುವೆ ಅಪಘಾತ ಸಂಭವಿಸಿದೆ ಬೈಕ್ ಸವಾರರನ್ನು ವಿಟ್ಲ ಸಮೀಪದ ಬಾಯಾರಿನ ಗುರುಪ್ರಸಾದ್ ಮತ್ತು ಶಶಿಕಲಾ ಎಂದು ಗುರುತಿಸಲಾಗಿದೆ, ಗಾಯಾಳುಗಳನ್ನು ಸ್ಥಳಿಯರ ನೆರವಿನಿಂದ ಶಿವ ಅಂಭ್ಯುಲೆನ್ಸ್ ಮುಖಾಂತರ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ, ಘಟನೆಯಲ್ಲಿ ಕಾರು ಸಮೀಪದ ದಿಬ್ಬಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿದೆ.

ರಾಜ್ಯ