ವಿಶೇಷ ವರದಿ- ಶಶಿಕಲಾ ಮಂಜುನಾಥ್

ಬೌದ್ಧಿಕ ಆಸ್ತಿ ಎಂದರೇನು?
ಬೌದ್ಧಿಕ ಆಸ್ತಿ (IP) ಮನುಷ್ಯನ ಬುದ್ಧಿಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡ ಆಸ್ತಿಯ ಒಂದು ವರ್ಗ. ಇದು ಆವಿಷ್ಕಾರ, ಸಾಹಿತ್ಯ ಮತ್ತು ಕಲಾತ್ಮಕ ಕಾರ್ಯ, ವಿನ್ಯಾಸಗಳು ಮತ್ತು ಸಂಕೇತಗಳು, ಹೆಸರುಗಳು ಮತ್ತು ಚಿತ್ರಗಳಂತಹ ಮನಸ್ಸಿನ ಸೃಷ್ಟಿಯನ್ನು ಸೂಚಿಸುತ್ತದೆ.
ಬೌದ್ಧಿಕ ಆಸ್ತಿಯ ಅಡಿಯಲ್ಲಿ ಯಾವೆಲ್ಲ ಅಂಶಗಳು ಬರುತ್ತವೆ?

ಕೃತಿಸ್ವಾಮ್ಯ: ಕೃತಿಸ್ವಾಮ್ಯ ಮೂಲ ವಸ್ತುವಿನ ಲೇಖಕರು ಮತ್ತು ರಚನೆಕಾರರಿಗೆ ತಮ್ಮ ವಸ್ತುಗಳನ್ನು ಬಳಸಲು, ಅಥವಾ ನಕಲು ಮಾಡುವ ವಿಶೇಷ ಹಕ್ಕನ್ನು ನೀಡುತ್ತದೆ.
ಪೇಟೆಂಟ್: ಹೂಡಿಕೆದಾರರಿಗೆ ಇರುವ ಆಸ್ತಿ ಹಕ್ಕು. ಇದನ್ನು ಸಾಮಾನ್ಯವಾಗಿ ಸರಕಾರಿ ಸಂಸ್ಥೆ ನೀಡುತ್ತದೆ.
ಟ್ರೇಡ್‌ಮಾರ್ಕ್: ಟ್ರೇಡ್‌ಮಾರ್ಕ್ ಸಾಮಾನ್ಯವಾಗಿ ಕಂಪನಿಯ ಬ್ರ್ಯಾಂಡ್‌ಗೆ ಸೇರಿರುತ್ತದೆ. ಉದಾಹರಣೆಗೆ, ಪೆಪ್ಸಿಯ ಲೋಗೋ ಮತ್ತು ಬ್ರಾಂಡ್ ಹೆಸರು ಪೆಪ್ಸಿ ಕಂಪನಿಯ ಒಡೆತನದಲ್ಲಿದೆ.
ಫ್ರಾಂಚೈಸ್: ಒಂದು ಕಂಪನಿ, ವ್ಯಕ್ತಿ ಅಥವಾ ಫ್ರಾಂಚೈಸಿ ಎಂಬ ಪಾರ್ಟಿ ಖರೀದಿ ಮಾಡುವ ಪರವಾನಗಿ. ಫಲವಾಗಿ, ಅವರು ಕಂಪನಿಯ-ಫ್ರ್ಯಾಂಚೈಸರ್-ಹೆಸರು, ಟ್ರೇಡ್‌ಮಾರ್ಕ್, ಸ್ವಾಮ್ಯ-ಜ್ಞಾನ ಮತ್ತು ಪ್ರಕ್ರಿಯೆಗಳನ್ನು ಬಳಸಿಕೊಳ್ಳಬಹುದಾಗಿದೆ.
ವ್ಯಾಪಾರ ರಹಸ್ಯ: ಉದಾಹರಣೆಗೆ ವಿನ್ಯಾಸ, ಮಾದರಿ, ಪಾಕವಿಧಾನ, ಸೂತ್ರ ಅಥವಾ ಸ್ವಾಮ್ಯದ ಪ್ರಕ್ರಿಯೆ ಇತ್ಯಾದಿಗಳು.
ಡಿಜಿಟಲ್ ಸ್ವತ್ತುಗಳು : ಉದಾಹರಣೆಗೆ ಸ್ವಾಮ್ಯದ ಸಾಫ್ಟ್‌ವೇರ್ ಕೋಡ್ ಅಥವಾ ಅಲ್ಗಾರಿದಮ್‌ಗಳು ಮತ್ತು ಆನ್‌ಲೈನ್ ಡಿಜಿಟಲ್ ವಿಷಯಗಳು ಇತ್ಯಾದಿ.
ಇಷ್ಟೇ ಅಲ್ಲದೆ, ವ್ಯಾಪಾರ, ಕೈಗಾರಿಕಾ ವಿನ್ಯಾಸ, ಭೂಗೋಳಶಾಸ್ತ್ರ, ಆವಿಷ್ಕಾರ, ಪರವಾನಗಿ, ಸಸ್ಯ ವೈವಿಧ್ಯ ಗಳೂ ಬೌದ್ಧಿಕ ಆಸ್ತಿಗಳಾಗಿವೆ.
ವಿಶ್ವ ಬೌದ್ಧಿಕ ಆಸ್ತಿ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು?
ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಎರಡು ದಶಕಗಳಿಗೂ ಹಿಂದಿನಿಂದ ಆಚರಿಸಲಾಗುತ್ತಿದೆ. 1988 ರಲ್ಲಿ, ನ್ಯಾಷನಲ್ ಅಲ್ಜೀರಿಯನ್ ಇನ್ಸ್ಟಿಟ್ಯೂಟ್ ಫಾರ್ ಇಂಡಸ್ಟ್ರಿಯಲ್ ಪ್ರಾಪರ್ಟಿಯು ವರ್ಲ್ಡ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಶನ್ (WIPO) ಭಾಗವಾಗಿ ಪ್ರಸ್ತಾಪಿಸಿದಾಗ, ವಿಶ್ವ ಬೌದ್ಧಿಕ ಆಸ್ತಿ ದಿನದ ಕಲ್ಪನೆ ಪ್ರಾರಂಭವಾಯಿತು.
ವಿಶ್ವ ಬೌದ್ಧಿಕ ಆಸ್ತಿ ದಿನದ ಆಶಯವೇನು?
ಬೌದ್ಧಿಕ ಆಸ್ತಿ (IP) ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು (SDG): ನಾವೀನ್ಯತೆ ಮತ್ತು ಸೃಜನಶೀಲತೆಯೊಂದಿಗೆ ನಮ್ಮ ಭವಿಷ್ಯವನ್ನು ರೂಪಿಸುವುದು’ ವಿಶ್ವ ಬೌದ್ಧಿಕ ಆಸ್ತಿ ದಿನ 2024 ರ ಆಶಯ.
ವಿಶ್ವ ಬೌದ್ಧಿಕ ಆಸ್ತಿ ದಿನದ ಮಹತ್ವವೇನು?
ವಿಶ್ವ ಬೌದ್ಧಿಕ ಆಸ್ತಿ ದಿನವು ಆವಿಷ್ಕಾರಕರು ಮತ್ತು ಸೃಷ್ಟಿಕರ್ತರು ಮಾಡಿದ ಅದ್ಭುತ ಕಾರ್ಯಗಳನ್ನು ಗುರುತಿಸಿ, ಪುರಸ್ಕರಿಸುವುದು ಮತ್ತು ಅವರ ಸೃಜನಶೀಲತೆ ಮತ್ತು ಜಾಣ್ಮೆಯಿಂದ ಸಮಾಜಕ್ಕೆ ಸದುಪಯೋಗವಾಗುವುದನ್ನು ಖಚಿತಪಡಿಸಿಕೊಳ್ಳುತ್ತದೆ.
ವಿವಿಧ ಆಕಾರ ಮತ್ತು ಗಾತ್ರದ ಆಸ್ತಿಗಳಿವೆ. ಆದರೆ ಕೆಲವಕ್ಕೆ ಭೌತಿಕ ಅಸ್ತಿತ್ವವಿರುವುದಿಲ್ಲ. ಇವುಗಳನ್ನು ಅಮೂರ್ತ ಸ್ವತ್ತುಗಳು ಎನ್ನುತ್ತಾರೆ. ಇವುಗಳಿಗೂ ಭೌತಿಕ ಸ್ವತ್ತುಗಳಷ್ಟೇ ಪ್ರಾಧಾನ್ಯತೆ ಇದೆ. ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಮಾಡಬಹುದಾದ ಲೋಗೋಗಳು ಮತ್ತು ಬ್ರಾಂಡ್ ಹೆಸರುಗಳು ಗ್ರಾಹಕರಿಗೆ ಜನಪ್ರಿಯ ಕಂಪನಿಗಳು ಮತ್ತು ಅವುಗಳ ಉತ್ಪನ್ನಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಕಂಪನಿಗಳು ಈ ಸ್ವತ್ತುಗಳು ದುರುಪಯೋಗವಾಗದಂತೆ ಅಥವಾ ಇತರರು ಉಲ್ಲಂಘಿಸದಂತೆ ರಕ್ಷಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ.

