

ಲೋಕ ಸಭಾ ಚುನಾವಣೆಯ ಮಸ್ಟರಿಂಗ್ ಕೇಂದ್ರದಿಂದ ವಿವಿದ ಮತಗಟ್ಟೆಗಳಿಗೆ ತೆರಳುವ ಕಾರ್ಯ ಬಿರುಸುಗೊಂಡಿದೆ, ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗೆ EVM ಮೆಷಿನ್ ಗಳೊಂದಿಗೆ ಸಿಬ್ಬಂದಿಗಳು ತೆರಳಿದ್ದಾರೆ. ಸಿಆರ್ ಪಿ ಎಫ್ ನ 100 ಸಿಬ್ಬಂದಿ, ಪೊಲೀಸ್ ಇಲಾಖೆಯಿಂದ 426 ಮಂದಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ಧಾರವಾಡ ಭಾಗದ ಓರ್ವ ಡಿವೈಎಸ್ಪಿ, ಮೂರು ಪೊಲೀಸ್ ವೃತ ನಿರೀಕ್ಷಕರು,13 ಉಪ ನಿರೀಕ್ಷಕರುಗಳನ್ನು ಒಳಗೊಂಡಿದೆ. ಅಲ್ಲದೆ 82 ಮಂದಿ ಕೋಸ್ಟಲ್ ವಿಭಾಗದವರು, 145 ಮಂದಿ ಗ್ರಹರಕ್ಷಕ ದಳದ ಸಿಬ್ಬಂದಿ, ಉಳಿದಂತೆ ಬಳ್ಳಾರಿ ಸುಬ್ರಹ್ಮಣ್ಯ ಸುಳ್ಯ ಸೇರಿದ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯನ್ನು ಕೂಡ ಒಳಗೊಂಡಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 233 ಬೂತ್ ಗಳನ್ನು ಹೊಂದಿದ್ದು, ಭಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.




