

ಕಾಂಗ್ರೆಸ್ಸಿಗರು ಹೇಳೋದೆಲ್ಲವೂ ಸುಳ್ಳು. ಅವರ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಸುಳ್ಯದಲ್ಲಿ ಪ್ರತೀ ಬೂತ್ ನಿಂದ ನೂರು ಮತ ಹೆಚ್ಚಿಸುವುದು ಅವರ ಭ್ರಮೆ.ಈ ಬಾರಿಯೂ ಸುಳ್ಯದಲ್ಲಿ ದೊಡ್ಡ ಲೀಡ್ ಬಿಜೆಪಿ ಪಡೆದೇ ಪಡೆಯುತ್ತದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಕಾಂಗ್ರೇಸ್ ವಿರುದ್ದ ಹರಿಹಾಯ್ದು , ಬಿಜೆಪಿ ಗೆಲ್ಲಿಸಲು ಮತದಾರರಲ್ಲಿ ಮನವಿ ಮಾಡಿದರು.

ಅಪಪ್ರಚಾರ ಮಾಡುವುದಲ್ಲದೆ ,ಮತದಾರರಿಗೆ ಆಮಿಷ ಒಡ್ಡುತ್ತಿರುವುದೇ ಕಾಂಗ್ರೆಸ್ ಕೆಲಸ. ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡೇ ಕಾಲ ಹರಣ ಮಾಡುತಿದ್ದಾರೆ, ಈ ದೇಶದ ಜನರಿಗೆ ನೆಮ್ಮದಿಯ ಬದುಕಿಗಾಗಿ ಕೇಂದ್ರದಲ್ಲಿ ಮೋದಿ ಸರಕಾರ ಬರಲೇ ಬೇಕು. ಇದಕ್ಕಾಗಿ ಎಲ್ಲ ಮತದಾರರು ಬಿಜೆಪಿಯನ್ನು ಗೆಲ್ಲಿಸಲು ಸಂಕಲ್ಪ ಮಾಡಿದ್ದಾರೆ, ಎಂದು ಹೇಳಿದರು.

ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಗ್ಯಾರಂಟಿ ಯೋಜನೆಯ ದೊಡ್ಡ ಫಲಾನುಭವಿಗಳು ಕಾಂಗ್ರೆಸ್ಸಿಗರೇ. ಅದು ಕಾಂಗ್ರೇಸಿಗರ ಗಂಜಿ ಕೇಂದ್ರ. ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ಸಿಗರಿಂದ ಲೂಟಿ ನಡೆಯುತ್ತಿದೆ. ಗ್ಯಾರಂಟಿ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ
ನಗರ ಪಂಚಾಯತ್‌ನಲ್ಲಿ ಭಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದೇ ಕಾಂಗ್ರೆಸ್ಸಿನ ಸದಸ್ಯರು. ಅಕ್ರಮಗಳಿಗೆ ಪ್ರೋತ್ಸಾಹ ನೀಡೋದೇ ಅವರು ಎಂದು ಹೇಳಿದಲ್ಲದೆ, ಗ್ಯಾರಂಟಿ ಯೋಜನೆಯನ್ನು ನಾವು ಟೀಕಿಸಲು ಹೋಗುವುದಿಲ್ಲ. ಆದರೆ ಅವರು ಪ್ರತೀ ಬಾರೀಯೂ ಬಿಜೆಪಿಯವರಿಗೆ ಗ್ಯಾರಂಟಿ ಫಲಾನುಭವಿಗಳು ಎನ್ನುವ ಅವರು, ಕೇಂದ್ರ ಸರಕಾರ ಫಸಲ್ ಬಿಮಾ ಯೋಜನೆಯಲ್ಲಿ ಲಕ್ಷ ಗಟ್ಟಲೆ ಹಣ ಕಾಂಗ್ರೇಸ್ ನವರ ಖಾತೆಗೆ ಬಿದ್ದಿಲ್ಲವೇ, ಕಿಸಾನ್ ಸಮ್ಮಾನ್ ನಿಧಿಯನ್ನು ಅವರು ಸ್ವೀಕರಿಸಿಲ್ಲವೆ ಎಂದು ಪ್ರಶ್ನೆಮಾಡಿದರು.

ಅವರು ಸತ್ಯ ಒಪ್ಪಿಕೊಳ್ಳಲಿ. ನಮ್ಮಲ್ಲಿಯೂ ಆ ಪಟ್ಟಿ ಇದೆ. ಬೇಕಾದರೆ ಬಹಿರಂಗಪಡಿಸುತ್ತೇವೆ.ಕಾಂಗ್ರೇಸ್ ಮೀನು ಕೊಟ್ಟಿರಬಹುದು ನಾವು ಮುದ್ರಾ ಮುಂತಾದ ಯೋಜನೆಗಳಿಂದ ಮೀನು ಹಿಡಿಯುವ ವಿಧ್ಯೆ, ಅಂದರೆ ಜನರಿಗೆ ಬದಕಲು ಅನುಕೂಲವಾದ ವಾತಾವರಣ ನಿರ್ಮಿಸಿದ್ದೇವೆ ಎಂದರು
ಹರೀಶ್ ಕಂಜಿಪಿಲಿ ಮಾತನಾಡಿ, “ಸುಳ್ಯ ಇಂದು ಬಿಜೆಪಿಯ ಭದ್ರ ಕೋಟೆ ಮುಂದೆಯೂ ಭದ್ರ ಕೋಟೆಯಾಗಿಯೇ ಇರುತ್ತದೆ. ನಾವು ಜನ ಸಾಮಾನ್ಯರ ಕಷ್ಟಕ್ಕೆ ಧ್ವನಿಯಾಗ ಕೆಲಸಮಾಡಿದ ಕಾರಣ ಜನರು ನಮ್ಮ ಜತೆಗಿದ್ದಾರೆ. ರಾಜ್ಯಸರಕಾರದ ಗ್ಯಾರಂಟಿ ಬಗ್ಗೆ ವಿರೋಧವಿಲ್ಲ, ಆದರೆ ಗ್ಯಾರಂಟಿ ಅನುಷ್ಠಾನಗೊಳಿಸಲು ಅಧಿಕಾರಿಗಳಿದ್ದಾರೆ, ಇದಕ್ಕೆ ಪ್ರತ್ಯೇಕ ಅನುಷ್ಠಾನ ಸಮಿತಿ ಯಾಕೆ, ಅವರಿಗೆ ಗೌರವ ಧನ ಯಾಕೆ..ಎಲ್ಲವನ್ನು ನೋಡಿದರೆ ಗ್ಯಾರಂಟಿಯಲ್ಲಿ ಕೊಳ್ಳೆ ಹೊಡೆಯಲು ಮಾಡಿಕೊಟ್ಟ ಮಾರ್ಗವಲ್ಲವೇ.
ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ವಿಸರ್ಜಿಸಬೇಕೆಂದು ಸರಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದ ಅವರು,
ಧಾರ್ಮಿಕ ಪರಿಷತ್ ಸದಸ್ಯರಾದವರು ಯಾವುದೇ ಪಕ್ಷದ ಪರ ಇರಬಾರದು. ಆದರೆ ಲಕ್ಷ್ಮೀಶ್ ಗಬ್ಲಡ್ಕರು ಕಾಂಗ್ರೆಸ್ ಗೆಲ್ಲಿಸಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಅವರನ್ನು ಸಮಿತಿಯಿಂದ ವಜಾ ಮಾಡಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ನಾವು ದೂರು ನೀಡಲಿದ್ದೇವೆ ಎಂದು ಹೇಳಿದರು.
ಬಿಎಂಎಸ್ ಕಾರ್ಮಿಕ ಸಂಘಟನೆಯ ತಾಲೂಕು ಕಾರ್ಯದರ್ಶಿ ಮಧುಸೂಧನ್ ಮಾತನಾಡಿ, ಈಗಿನ ರಾಜ್ಯಸರಕಾರ ಕಾರ್ಮಿಕರಿಗೆ ಹಾಗೂ ಕಾರ್ಮಿಕ ಮಕ್ಕಳಿಗೆ ಅನ್ಯಾಯ ಮಾಡಿದೆ. ವಿದ್ಯಾರ್ಥಿ ವೇತನವನ್ನು ಕಡಿತ ಮಾಡಿದೆ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ ಬಿಜೆಪಿ ನಗರ ಅಧ್ಯಕ್ಷ ಎ.ಟಿ. ಕುಸುಮಾಧರ, ಮಂಡಲ ಉಪಾಧ್ಯಕ್ಷ ಶಿವಪ್ರಸಾನ್ ನಡುತೋಟ, ಬಿಜೆಪಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಆಲೆಟ್ಟಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ್ ಪಾತಿಕಲ್ಲು ಇದ್ದರು.
