
ಉಳ್ಳಾಲ: ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಸ್ಟಾಲ್ ಒಂದರಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಸ್ಟಾಲ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಉಳ್ಳಾಲದ ದೇರಳಕಟ್ಟೆಯಲ್ಲಿ ನಡೆದಿದೆ.


ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲೇ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಅಂಗಡಿ ಮಾಲೀಕ ಕಾರ್ನ್ ತಯಾರಿಸುವಾಗ ಈ ಅವಘಡ ಸಂಭವಿಸಿದೆ. ತಕ್ಷಣ ಅಂಗಡಿ ಮಾಲೀಕ ಹಾಗೂ ಸ್ವೀಟ್ ಕಾರ್ನ ತಿನ್ನಲು ಬಂದಿದ್ದ ಗ್ರಾಹಕರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಮರಳು ಹಾಗೂ ನೀರನ್ನ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸ್ಟಾಲ್ ಉರಿದು ಭಸ್ಮವಾಗಿ ಹೋಗಿದೆ.
