ಜಿಲ್ಲೆಯಲ್ಲಿ 196 ಮಂದಿ ಕೋವಿ ಪರವಾನಿಗೆ ದಾರರಿಗೆ ಕೋವಿ ಠೇವಣಿಯಲ್ಲಿ ವಿನಾಯಿತಿ : ಕೊನೆಗೂ ರೈತರಿಗೆ ಒಲಿದ ಜಯ..!

ಜಿಲ್ಲೆಯಲ್ಲಿ 196 ಮಂದಿ ಕೋವಿ ಪರವಾನಿಗೆ ದಾರರಿಗೆ ಕೋವಿ ಠೇವಣಿಯಲ್ಲಿ ವಿನಾಯಿತಿ : ಕೊನೆಗೂ ರೈತರಿಗೆ ಒಲಿದ ಜಯ..!

ಚುನಾವಣೆ ಸಂದರ್ಭ ರೈತರ ಪರವಾನಿಗೆ ಹೊಂದಿದ ಕೋವಿಗಳನ್ನು ಠೇವಣಿ ಇಡಬೇಕಾದ ಅನಿವಾರ್ಯತೆ ಇತ್ತು ಆದರೆ ಜಿಲ್ಲೆಯಲ್ಲಿ ಕೃಷಿಗಳಿಗೆ ಪ್ರಾಣಿಗಳಿಂದ ತೀವ್ರ ಸ್ವರೂಪದಲ್ಲಿ ಹಾನಿಯಾಗುತ್ತಿರುವ ಹಿನ್ನಲೆಯಲ್ಲಿ ಕೋವಿ ಠೇವಣಾತಿಗೆ ತೀವ್ರ ವಿರೋಧ ಮತ್ತು ಅಸಮದಾನ ಹೊಂದಿದ್ದರು, ಆದರೂ ಕೋವಿ ಠೇವಣಾತಿಯನ್ನು ಕಡ್ಡಾಯಗೊಳಿಸುವಂತೆ  ಚುನಾವಣಾ ಆಯೋಗ ನಿರ್ದೇಶಿಸಿತ್ತು, ಮತ್ತು ಮಾರ್ಚ್ 31 ರೊಳಗೆ ಎಲ್ಲಾ ಕೋವಿಗಳನ್ನು ಠಾಣೆಗೆ ತಂದೊಪ್ಪಿಸಲು ಆದೇಶವಾಗಿತ್ತು, ಇದನ್ನು ಪ್ರಶ್ನಿಸಿ ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು, 

ಕಾಡು ಹಂದಿಗಳು , ಮಂಗ  , ಮುಳ್ಳು ಹಂದಿಗಳು ರೈತರ ಬೆಳೆಗಳಿಗೆ ತೀವ್ರ ಹಾನಿ ಎಸಗುತ್ತಿರುವ ಹಿನ್ನಲೆಯಲ್ಲಿ ರಕ್ಷಣೆ ಕೋರಿ ಪೋಲಿಸ್ ಮೊರೆ ಹೋದ ಘಟನೆಗಳು ನಡೆದಿತ್ತು.

ಈ ಎಲ್ಲಾ ಬೆಳವಣಿಗೆ ಮತ್ತು ರೈತರ ಸಂಕಷ್ಟ ಪರಿಗಣಿಸಿ ನ್ಯಾಯಾಲಯ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 196 ಮಂದಿ ರೈತರಿಗೆ ಕೋವಿ ಠೇವಣಾತಿಯಲ್ಲಿ ವಿನಾಯಿತಿ ನೀಡಿ ಆದೇಶ ಮಾಡಿದೆ ಇದರಲ್ಲಿ ಸುಳ್ಯ ಪುತ್ತೂರು ಕಡಬ ಹಾಗೂ ಬಂಟ್ವಾಳದ ರೈತರು ವಿನಾಯಿತಿ ಲಿಸ್ಟ್ ನಲ್ಲಿದ್ದಾರೆ, ಈ ಹೋರಾಟಕ್ಕೆ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿತ್ತು.

ರಾಜ್ಯ