
ಸುಳ್ಯದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯಿಂದ ಮತಪ್ರಚಾರ ಆರಂಭವಾಗಿದೆ.ಸುಳ್ಯದ ಹಳೆಗೇಟಿನಲ್ಲಿ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಹಾಗೂ ನಾಯಕರು ಅವರನ್ನು ಸ್ವಾಗತಿಸಿದರು.ಪದ್ಮರಾಜ್ ಶಕುಂತಳ ಶೆಟ್ಟಿ, ಕೃಷ್ಣಪ್ಪ , ಬ್ಲಾಕ್ ಅಧ್ಯಕ್ಷ ಪಿ ಸಿ ಜಯರಾಮ ಸೇರಿದಂತೆ ನೂರಾರು ನಾಯಕರು ಪದ್ಮರಾಜ್ ಜೊತೆ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಾರೆ, ಆಮ್ ಆದ್ಮಿ ಪಕ್ಷದ ಸದಸ್ಯರು ಸಾಥ್ ನೀಡಿದೆ,


ಅಡಿಕೆ ಹಾಳೆಯಿಂದ ಟೋಪಿ.
ಮೆರವಣಿಗೆಯಲ್ಲಿ ಕಾಂಗ್ರೇಸ್ ಮುಖಂಡ ಗೋಕಲ್ ದಾಸ್ ಧರಿಸಿರುವ ಅಡಿಕೆ ಹಾಳೆಯ ಟೋಪಿ ಆಕರ್ಷಣೆ ಮೂಡಿಸಿದೆ, ಅಡಿಕೆಗೆ ತಗುಲಿರುವ ಹಳದಿ ಮತ್ತುಎಲೆ ಚುಕ್ಕಿ ರೋಗದ ರೈತರ ಭವಣೆಯನ್ನು ಪ್ರಸ್ತುತಪಡಿಸಿದೆ.ಮೆರವಣಿಗೆಯಲ್ಲಿ ಭರತ್ ಮುಂಡೋಡಿ, ಸದಾನಂದ ಮಾವಜಿ, ಜಯಪ್ರಕಾಶ್ ರೈ, ಮುಸ್ತಾಪಾ ಕೆ.ಎಂ , ಭವಾನಿಶಂಕರ ಕಲ್ಮಡ್ಕ ಸೇರಿದಂತೆ ನೂರಾರು ಪ್ರಮುಖ ನಾಯಕರಿದ್ದಾರೆ.

