ಸುಳ್ಯ : ಮೀನು ಹಿಡಿಯಲು ಹೋದ ನಾಲ್ವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಸಾವು..!

ಸುಳ್ಯ : ಮೀನು ಹಿಡಿಯಲು ಹೋದ ನಾಲ್ವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಸಾವು..!

ಸುಳ್ಯ : ಮೀನು ಹಿಡಿಯಲು ಹೋದ ನಾಲ್ವರಲ್ಲಿ ಓರ್ವ ನಿರೀನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯದ ಮಂಡೆಕೋಲು ಗ್ರಾಮದಿಂದ ವರದಿಯಾಗಿದೆ.

ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪೆ ನದಿಯಲ್ಲಿ ಈ ಘಟನೆ ನಡೆದಿದೆ. ಈಶ್ವರ ಮಂಗಲದ ನಾಲ್ಕು ಜನ ಪರಪ್ಪೆ ನದಿಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ನಾಲ್ವರಲ್ಲಿ ಒಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತಪಟ್ಟ ವ್ಯಕ್ತಿಯನ್ನು ಈಶ್ವರಮಂಗಲ ಪ್ರವೀಣ್ ಎಂದು ಗುರುತಿಸಲಾಗಿದೆ.ಮೃತದೇಹವನ್ನು ಪೈಚಾರ್ ಮುಳುಗು ತಜ್ಞರ ತಂಡದವರು ನದಿಯಿಂದ ಮೇಲೆತ್ತಿದ್ದಾರೆ. ಸುಳ್ಯ ಅಸ್ಪತ್ರೆಯ ಶವಗಾರದಲ್ಲಿ ಮೃತಹೇಹವನ್ನು ಇರಿಸಲಾಗಿದೆ. ಸುಳ್ಯ ಪೋಲಿಸ್ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ರಾಜ್ಯ