
ಸುಳ್ಯಕ್ಕೆ ಹಾದು ಬರುವ 33 ಕೆ.ವಿ. ವಿದ್ಯುತ್ ಲೈನ್ ಮೇಲೆ ಪೆರ್ನಾಜೆ ಯಲ್ಲಿ ಮರ ಬಿದ್ದಿದ್ದು, ತಂತಿಗಳು ತುಂಡರಿಸಲ್ಪಟ್ಟಿರುವುದರಿಂದ ಸುಳ್ಯ ಭಾಗಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಅದನ್ನು ಸರಿ ಪಡಿಸಲು ಮರ ತೆರವು ಕಾರ್ಯಾಚರಣೆ ಮತ್ತು ತಂತಿಗಳ ಜೋಡನಾ ಕಾರ್ಯ ಭರದಿಂದ ನಡೆಯುತಿದ್ದು, ಇಂದು ರಾತ್ರಿ 7 -8 ಗಂಟೆ ತನಕ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕ ರು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

