
ಕಡಬ: ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆ ಆಟೋ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಆಟೊದೊಳಗಿದ್ದ ನಾಲ್ಕುವರ್ಷದ ಮಗು ರಸ್ತೆಗೆ ಎಸೆಯಲ್ಪಟು ಗಂಭೀರ ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದಿಂದ ವರದಿಯಾಗಿದೆ.

ಸಾತ್ವೀಕ್(4ವರ್ಷ) ಗಾಯಗೊಂಡ ಮಗು. ಹಳೇನೇರಂಕಿ-ರಾಮಕುಂಜ ಡಾಮಾರು ರಸ್ತೆಯಲ್ಲಿ ಆತೂರು ಕಡೆಗೆ ಆಟೋರಿಕ್ಷಾ ಚಾಲಕ ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಇಳಿಜಾರು ರಸ್ತೆಯಲ್ಲಿ ಬ್ರೇಕ್ ಹಾಕಿದಾಗ ಆಟೋರಿಕ್ಷಾದಲ್ಲಿದ್ದ ಮಗು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದೆ ಎನ್ನಲಾಗಿದೆ.
ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿ ತಿಳಿದು ಬಂದಿದೆ.ರಾಮಕುಂಜ ಕಾಜರಕುಕ್ಕು ನಿವಾಸಿ ದಿನೇಶ್ ಎಂಬವರು ನೀಡಿದ ದೂರಿನಂತೆ ಆಟೋ ಚಾಲಕ ಶಿವಪ್ರಸಾದ್ ಎಂಬವರ ವಿರುದ್ದ ಕಡಬ ಪೊಲೀಸ್ ಠಾಣಾ ಅ.ಕ್ರ 48/2024 ಕಲಂ: 279.337ಐ.ಪಿ.ಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
