
ಸುರತ್ಕಲ್ : ಮುಂಚೂರು ಸಮೀಪ ರೈಲ್ವೇ ಹಳಿ ಬಳಿಯ ಬಾಡಿಗೆ ಮನೆಯೊಂದರಿಂದ ನಗದು ಸಹಿತ ಚಿನ್ನ, ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು 24 ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹೊಸಕೋಟೆ ನಿವಾಸಿ ಜಂಬಯ್ಯ (24) ಎಂದು ಗುರುತಿಸಲಾಗಿದೆ. ಈತ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಮಿಕ ದಂಪತಿಗಳಾದ ಕಲ್ಲೇಶ್ವರ ಶೇಖಪ್ಪ ನೆಲವಡಿ ಹದಿಮೂರು ವರ್ಷಗಳಿಂದ ಇಲ್ಲೇ ದುಡಿಯುತ್ತಿದ್ದು, ಎಂದಿನಂತೆ ಇಬ್ಬರೂ ಕೆಲಸಕ್ಕೆ ಹಾಗೂ ಅತ್ತೆ ಬಸಮ್ಮ ಮನೆಯಿಂದ ಹೊರಗೆ ಹೋಗಿದ್ದರು. ವಾಪಸು ಬಂದಾಗ ಮನೆಯ ಮುಂಬಾಗಿಲಿನ ಬೀಗವನ್ನು ಯಾರೋ ಕಳ್ಳರು ಒಡೆದು ಮನೆಯ ಹಾಲ್‌ನಲ್ಲಿ ಇಟ್ಟಿದ್ದ ಕಪಾಟಿನ ಬಾಗಿಲನ್ನು ತೆರೆದು ಅದರ ಒಳಗಿದ್ದ 2.50 ಲಕ್ಷ ರೂ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಮತ್ತು ನಗದು ಸುಮಾರು 50 ಸಾವಿರ ರೂ. ಕಳವಾಗಿತ್ತು. ಕಾರು, ಮೊಬೈಲ್ ಸಹಿತ ಕಳವಾದ ನಗದು, ಸೊತ್ತುಗಳನ್ನೂ ವಶಕ್ಕೆ ಪಡೆದಿದ್ದಾರೆ.ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಡುಬಿದ್ರಿಯ ನಂದಿಕೂರು ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
