

ಕಳೆದ 23 ವರ್ಷಗಳಿಂದ ಸಂಪೂರ್ಣ್ ಉಚಿತವಾಗಿ ಸುಳ್ಯ ಹಳೆಗೇಟಿನ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುವ ವೇದ-ಯೋಗ-ಕಲಾ ಶಿಬಿರವು ಮುಂದುವರೆದು ಈ ಬಾರಿ

24 ನೇ ವರ್ಷದ ವೇದ ಶಿಬಿರವು ಸುಳ್ಯದ ಶ್ರೀ ಕೇಶವಕೃಪಾದಲ್ಲಿ ಏ.21ರಿಂದ ಮೇ.19ರ ತನಕ ನಡೆಯಲಿದೆ ಎಂದು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ. ಅವರು ಇಂದು ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ತಿಳಿಸಿದರು.
ವೇದ ಶಿಬಿರಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿದೆ. ಕರ್ನಾಟಕ, ಕೇರಳ ಸೇರಿ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. 207 ಮಂದಿ ಈಗಾಗಲೇ ನೋಂದಾಯಿಸಿ ಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಏ.21ರಂದು ಪೂ.10-30ಕ್ಕೆ “ಶ್ರೀ ಕೇಶವಕಿರಣ” ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಅಮೇರಿದಲ್ಲಿ ಇರುವ ಏಕೈಕ ಹಿಂದೂ ದೇವಾಲಯದ ಪೌರೋಹಿತ್ಯ ನಡೆಸುವ ವಿದ್ವಾನ್ ರೂಪೇಶ್ ಆಚಾರ್ಯ ಮತ್ತು ಶ್ರೀಮತಿ ಶ್ರುತಿ ರೂಪೇಶ್ ಆಚಾರ್ಯ ದಂಪತಿಗಳು ಶಿಬಿರವನ್ನು ಉದ್ಘಾಟಿಸುವರು. ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಂಚಾಲಕರಾದ ವೇದ ಮೂರ್ತಿ. ಅಭಿರಾಮ ಶರ್ಮ ಅಧ್ಯಕ್ಷತೆ ವಹಿಸುವರು.ಮಂಕು ತಿಮ್ಮನ ಕಗ್ಗದ ಪ್ರವಚನಕಾರರಾದ ವಿದ್ವಾನ್ ಜಿ.ಎಸ್.ನಟೇಶ್ ಶಿವಮೊಗ್ಗ ದಿಕ್ಸೂಚಿ ಭಾಷಣ ಮಾಡುವರು.ಪ್ರಗತಿಪರ ಕೃಷಿಕರು ಹಾಗೂ ಶಿಬಿರದ ಹಿರಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಭಟ್ ತೊಂಡೆಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರುಮಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿರಲಿದಗದ್ದಾರೆ ಎಂದು ಎಂದು ಅವರು ತಿಳಿಸುದರು.ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್ ಶಿವನಿಲಯ ಉಬರಡ್ಕ, ರಾಧಾಕೃಷ್ಣ ಭಟ್ ಉಬರಡ್ಕ, ಸುಜಾತಾ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.
