
ಮಂಗಳೂರು: ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ರೈಲಿನ ಎಸಿ ಕೋಚ್ ನಲ್ಲಿ 3.91 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ.

ಮಂಗಳೂರು ನಗರದ ಜಪ್ಪು ನಿವಾಸಿ 74ರ ಹರೆಯದ ವೃದ್ಧೆ, ಆಕೆಯ ಮಗಳು ಹಾಗೂ ಮೊಮ್ಮಕ್ಕಳು ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಹೊರಟು ಮರುದಿನ ಬೆಳಗ್ಗೆ ಮನೆಗೆ ತಲುಪಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ ಎರಡು ಬಳೆಗಳು, ಸರ ಸೇರಿ ಸುಮಾರು 59.885 ಗ್ರಾಂ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆಬಂದಿದೆ. ಈ ಬಗ್ಗೆ ರೈಲ್ವೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
