
ಮಡಿಕೇರಿ ಕಡೆಯಿಂದ ಬಂದ ರಿಡ್ಸ್ ಕಾರೋಂದು ವಿರುದ್ದ ದಿಕ್ಕಿನಲ್ಲಿ ಬಂದು ಹೋಟೆಲ್ಗೆ ನುಗ್ಗಿದ ಪರಿಣಾಮವಾಗಿ ಮೂವರಿಗೆ ಗಾಯವಾದ ಘಟನೆ ವರದಿಯಾಗಿದೆ, ಗಾಯ ಗೊಂಡವರನ್ನು ಪೆರಾಜೆ ಪೀಚೆ ಲಿಕಿತ್, ಪೀಚೆ ಸುಮನ್ ಹಾಗೂ ಹೋಟೆಲ್ ಮಾಲಕ ನೌಪಲ್ ಎಂದು ತಿಳಿದುಬಂದಿದೆ. ಅರಂತೋಡು ಕಡೆಗೆ ಹೋಗಿದ್ದ ಪೀಚೆ ಮನೆ ಲಿಕಿತ್ ಮತ್ತು ಸುಮನ್ ಪೆರಾಜೆಯಲ್ಲಿ ನೌಫಲ್ ರ ಹೋಟೆಲ್ಗೆ ಚಾ ಕುಡಿಯಲೆಂದು ತೆರಳಿ ಹೋಟೆಲ್ ನಲ್ಲಿ ಕುಳಿತ್ತಿದ್ದರು, ಇದೇ ಸಂದರ್ಭ ವೇಗವಾಗಿ ಬಂದ ರಿಡ್ಜ್ ಕಾರು ಹೋಟೆಲ್ಗೆ ಗುದ್ದಿದ್ದು , ಈ ಸಂದರ್ಭ ಲಿಕಿತ್, ಸುಮನ್ ಹಾಗೂ ಹೋಟೆಲ್ ಮಾಲಕ ನೌಫಲ್ ಗಾಯಗೊಂಡರು, ಗಾಯಾಳುಗಳನ್ನು ಸುಳ್ಯದ ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳು ಲಿಕಿತ್ ಪೀಚೆಯ ಸ್ಥಿತಿ ಗಂಭೀರವಾಗಿರುವ ಹಿನ್ನಲೆ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.ಕಾರಿನಲ್ಲಿ ಐದು ಮಂದಿ ಇದ್ದರೆಂದು ಹೇಳಲಾಗಿದೆ,


